ಆಣೂರು, ಹಂಸಬಾವಿ ಎಂವಿಎಸ್ ಪರಿಶೀಲಿಸಿದ ಡಿಸಿ

5 HVR 2 A
Published on

ಹಾವೇರಿ: ಹಾವೇರಿ: ಜಿಲ್ಲೆಯಲ್ಲಿ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆ ಅಡಿಯಲ್ಲಿ ಕೈಗೊಂಡಿರುವ 51 ಗ್ರಾಮಗಳಿಗೆ ನೀರು ಪೂರೈಸುವ ಆಣೂರು, ಹಂಸಬಾವಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಎಂವಿಎಸ್)ಯ ಕಾಮಗಾರಿಗಳನ್ನು ಬುಧವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ನೇತೃತ್ವದ ತಂಡ ಪರಿಶೀಲಿಸಿತು.

ಬ್ಯಾಡಗಿ, ರಾಣೆಬೆನ್ನೂರ, ಹಾವೇರಿ ಹಾಗೂ ಹಿರೇಕೆರೂರ ತಾಲೂಕಿನ ವಿವಿಧ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಆಣೂರು ಬಹುಗ್ರಾಮ ನದಿ ನೀರು ಯೋಜನೆಯ ಜಾಕ್‌ವೆಲ್ ಮತ್ತು ನೀರು ಶುದ್ದೀಕರಣ ಘಟಕ ಹಾಗೂ ಹಂಸಬಾವಿ ಬಹುಗ್ರಾಮ ನದಿ ನೀರು ಯೋಜನೆಯ ಜಾಕ್‌ವೆಲ್ ಮತ್ತು ನೀರು ಶುದ್ಧೀಕರಣ ಘಟಕಗಳ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಜಿಲ್ಲೆಗೆ ಹಂಚಿಕೆಯಾಗಿರುವ ಬಹುಗ್ರಾಮ ಕುಡಿಯುವ ನೀರಾವರಿ ಯೋಜನೆಯ ಕಾಮಗಾರಿಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರು ಕ್ರಮ ವಹಿಸಬೇಕು ಎಂದು ಸೂಚಿದರು.

ನೀರಾವರಿ ಕಾಮಗಾರಿಗಳ ಅನಗತ್ಯ ವಿಳಂಬವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಗೊತ್ತುಪಡಿಸಿದ ಅವಧಿಯಲ್ಲಿ ಜಿಲ್ಲೆಗೆ ಹಂಚಿಕೆಯಾಗಿರುವ ಬಹು ಗ್ರಾಮ ಕುಡಿಯುವ ನೀರಾವರಿ ಯೋಜನೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಅದರ ಉಪಯುಕ್ತತೆ ಜನತೆಗೆ ತಲುಪುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಕ್ಷಯ ಶ್ರೀಧರ, ನೀರಾವರಿ ಇಲಾಖೆ ಅಧಿಕಾರಿಗಳು, ಇತರ ಅಧಿಕಾರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net