ಅನ್ನಭಾಗ್ಯ ನೇರ ನಗದು ವರ್ಗಾವಣೆಗೆ ಅಂಚೆ ಇಲಾಖೆಯಲ್ಲಿ ಆಧಾರ್ ಸೀಡಿಂಗ್

Published on

ಹಾವೇರಿ: ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ದೊರೆಯುವ ನೇರ ನಗದು ವರ್ಗಾವಣೆಗಾಗಿ ಅಂಚೆ ಇಲಾಖೆಯಲ್ಲಿ ಈಗಾಗಲೇ ಉಳಿತಾಯ ಖಾತೆ ಹೊಂದಿರುವವರು ಆಧಾರ್ ಸೀಡಿಂಗ್‌ಅನ್ನು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಮಾಡಿಸಿಕೊಳ್ಳಬಹುದು. ಖಾತೆ ಹೊಂದಿರದವರು ಹತ್ತಿರದ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಅಥವಾ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆದು ಅನ್ನಭಾಗ್ಯದ ಯೋಜನೆಯ ಲಾಭವನ್ನು ಪಡೆಯುವಂತೆ ಹಾವೇರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net