

ಹಾವೇರಿ: ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಹಾವೇರಿ ನಗರದ ಸುಭಾಷ ವೃತ್ತದಲ್ಲಿ ಗುರುವಾರ ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಭಾರತೀಯರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸ್ಥೆ ಅಧ್ಯಕ್ಷ ಇರ್ಫಾನ್ ಖಾನ್ ಪಠಾಣ, ಉಪಾಧ್ಯಕ್ಷರಾದ ಅನ್ವರ್ ಕಡೆಮನಿ, ಚಮನ್ ಮುಲ್ಲಾ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೆರಿ, ಆಶು ಖಾಜಿ, ಉಮರ್ ಮಾಳಗಿ, ಜಮೀರ್ ಜಿಗರಿ, ಸಾಧಿಕ್ ಸವಣೂರ, ಅಮಿರಜಾನ್ ಬೇಪಾರಿ, ಸಾದಿಕ್ ಕೊತ್ವಾಲ್, ಖಮರ್ ಕಲ್ಯಾಣಿ, ಇಕ್ಬಾಲ್ ಶಿಡಗನಾಳ, ಅಜಮತ್ ಶೇಖ್, ಖಾಸಿಂಸಾಬ ಅಗಡಿ, ಗೌಸ್ ಹತ್ತಿಕಾಳ, ಸಾದಿಕ್ ಮೇಲಮೂರಿ, ಸಾದಿಕ್ ಮುಲ್ಲಾ, ಶಫಿ ಗೋಲಿಬಾರ್, ಅಬ್ದುಲ್ ಖಾದರ್ ಧಾರವಾಡ, ಇತರರಿದ್ದರು.