ಎಲ್ಲೆಡೆ ಅಂಗಾರಕ ಸಂಕಷ್ಟಿ ವಿಶೇಷ ಪೂಜೆ; ಸಂಕಷ್ಟ ಹರ ಗಣಪತಿ ಸ್ತೋತ್ರ ಪಠಣ

13 HVR 4 B
Published on

ಹಾವೇರಿ: ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಆಚರಿಸುವ ಅಂಗಾರಕ ಸಂಕಷ್ಟಿಯನ್ನು ಮಂಗಳವಾರ ಜಿಲ್ಲೆಯಾದ್ಯಂತ ಭಕ್ತರು ಭಕ್ತಿಪೂರ್ವಕವಾಗಿ ಆಚರಿಸಿದರು. ವಿಘ್ನ ನಿವಾರಕ ವ್ನಿೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿ ಪುನೀತರಾದರು.

ಬೆಳ್ಳಂಬೆಳಗ್ಗೆ ಭಕ್ತರು ಶುಭ್ರ ವಸ್ತ್ರ ಧರಿಸಿ, ಮನೆಯಲ್ಲಿ ಗಣೇಶನಿಗೆ ಮೋದಕ, ಕಡಬು ತಯಾರಿಸಿ ಪೂಜೆ, ನೈವೇದ್ಯ ನೆರವೇರಿಸಿದರು. ನಂತರ ಗಣೇಶ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ನಗರದ ಎಂ.ಜಿ. ರಸ್ತೆಯ ಶ್ರೀ ಉದ್ಭವ ಗಣೇಶ ದೇವಸ್ಥಾನದಲ್ಲಿ ಶ್ರಾವಣ ಮಾಸ ಹಾಗೂ ಅಂಗಾರಕ ಸಂಕಷ್ಟಿ ನಿಮಿತ್ತ ಬೆಳಗ್ಗೆ ಗಣೀಶನ ಮೂರ್ತಿಗೆ ರುದ್ರಾಭಿಷೇಕ ಹಾಗೂ ಹೂವಿನ ಅಲಂಕಾರ, ವಿಶೇಷ ಪೂಜೆ, ಹೋಮ, ಮತ್ತಿತರ ಪೂಜಾ ಕೈಂಕರ್ಯ ನಡೆಯಿತು.

ನಗರದ ಹೊಸಮನಿ ಸಿದ್ದಪ್ಪ ವೃತ್ತದ ಶ್ರೀ ಉದ್ಭವ ಸಿದ್ದಿ ವಿಘ್ನೇಶ್ವರ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿ ನಿಮಿತ್ತ ಗಣೇಶ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಜಗದೀಶ ಬೆಟಗೇರಿ ಹಾಗೂ ಸಮಿತಿ ಸದಸ್ಯರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net