ಅಂಗನವಾಡಿಗಳಿಗೆ ಕಳಪೆ ಮೊಟ್ಟೆ ಪೂರೈಕೆ

13 HVR 8 B
Published on

ಹಾವೇರಿ: ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಹಾಗೂ ಗರ್ಭಿಣಿಯರ ಆರೋಗ್ಯಕ್ಕೆ ಸಹಕಾರಿಯಾಗಲೆಂದು ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳಿಗೆ ವಿತರಿಸುತ್ತಿರುವ ಮೊಟ್ಟೆಗಳು ಕಳಪೆಯಾಗಿವೆ ಎಂಬ ಆರೋಪ ಕೇಳಿ ಬಂದಿದೆ.
ಗುತ್ತಿಗೆದಾರರು ಸುಮಾರು ಅರ್ಧದಷ್ಟು ಚೆನ್ನಾಗಿರುವ ಮೊಟ್ಟೆಗಳನ್ನು ಪೂರೈಸಿ, ಉಳಿದ ಅರ್ಧದಷ್ಟು ಕಳಪೆ ಮೊಟ್ಟೆಗಳನ್ನು ಪೂರೈಸುತ್ತಿದ್ದಾರೆ. ಹಾಗಾಗಿ, ಕೊಳೆತ ಹಾಗೂ ಕಪ್ಪು ಬಣ್ಣದ ಮೊಟ್ಟೆಗಳು ಕಾಣಸಿಗುತ್ತಿವೆ. ಇದನ್ನು ಸೇವಿಸಿದರೆ ಮಕ್ಕಳು ಹಾಗೂ ಗರ್ಭಿಣಿಯರ ಆರೋಗ್ಯ ಹದಗೆಡುತ್ತದೆ. ವಾಂತಿ-ಭೇದಿಗೂ ಕಾರಣವಾಗುತ್ತದೆ. ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಇಂತಹ ಪ್ರಕರಣಗಳು ವರದಿಯಾಗಿವೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು. ಗುಣಮಟ್ಟದ ಮೊಟ್ಟೆ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net