

ಹಾವೇರಿ: ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ರೈತ ಸಂಘದ ವತಿಯಿಂದ ಮಂಗಳವಾರ ಎತ್ತುಗಳಿಗೆ ಪೂಜೆ ಮಾಡುವ ಮೂಲಕ ರೈತ ದಿನ ಆಚರಿಸಲಾಯಿತು. ಸಮಾರಂಭದಲ್ಲಿ ಹಿರಿಯ ರೈತರಿಗೆ ಸನ್ಮಾನ ಮಾಡಲಾಯಿತು. ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ದೇವಪ್ಪ ಇಚ್ಚಂಗಿ, ಚನ್ನಪ್ಪ ಶಿವಸಂಪಿಗೆ, ರಾಜು ತರ್ಲಘಟ್ಟ, ಬಸನಗೌಡ ಪಾಟೀಲ, ಡಾ.ಮಲ್ಲಿಕಾರ್ಜುನ, ಶಂಕ್ರಪ್ಪ ಕೋರಿಶೆಟ್ಟರ್, ಸುರೇಶ ವಾರ್ತಿ, ವೀರಪ್ಪ ಚಿನ್ನಿಕಟ್ಟಿ, ಶಬೀನಾ ನದಾಫ್, ರೇಷ್ಮಾ ಭಾನು, ಈರಣ್ಣ ಚಕ್ರಸಾಲಿ, ಮಲ್ಲಪ್ಪ ನಾಗನೂರು, ಇತರರಿದ್ದರು.