ಆಲದಕಟ್ಟಿ ಬಳಿ ಬೃಹತ್ ಪಟಾಕಿ ಗೋಡೌನ್ ಗೆ ಬೆಂಕಿ !

Pataki Fire
Published on

ಹಾವೇರಿ: ಇಲ್ಲಿನ ಹೊರವಲಯ ಆಲದಕಟ್ಟಿ ಬಳಿ ಬೃಹತ್ ಪಟಾಕಿ ಗೋಡೌನ್ ಗೆ ಬೆಂಕಿ ತಗುಲಿದೆ.

ಗಣಪತಿ ಹಬ್ಬಕ್ಕೆಂದು ಪಟಾಕಿ ತಂದು ದೊಡ್ಡ ಮಟ್ಟದಲ್ಲಿ ದಾಸ್ತಾನು ಮಾಡಲಾಗಿತ್ತು.

ದಾವಣಗೆರೆ ಮೂಲದ ಭೂಮಿಕಾ ಪಟಾಕಿ ಅಂಗಡಿಯ ಗೋಡೌನ್ ಬೆಂಕಿಗೆ ಆಹುತಿಯಾಗಿದೆ.

ಸುಮಾರು 60 ಲಕ್ಷಕ್ಕೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನು ಮಾಡಲಾಗಿತ್ತು.

ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿ.

ದಾಸ್ತಾನು ಮಾಡಲಾಗಿದ್ದ ಕಟ್ಟಡದ ಗೇಟ್ ಗೆ ವೆಲ್ಡಿಂಗ್ ಕಾರ್ಯ ನಡೆದಿತ್ತು.

ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಹಾವೇರಿ ಗ್ರಾಮಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net