ಆಲದಕಟ್ಟಿಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಹೆಜ್ಜೇನು ಕಡಿತ

27 HVR 11
Published on

ಹಾವೇರಿ: ಮಂಗಗಳು ಜಿಗಿದಾಡಿದ್ದರಿಂದ ಮರದಲ್ಲಿದ್ದ ಹೆಜ್ಜೇನು ಅಕ್ಕಪಕ್ಕದವರ ಮೇಲೆ ಏಕಾಏಕಿ ದಾಳಿ ಮಾಡಿದ ಪರಿಣಾಮ 15ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಬಸವೇಶ್ವರ ಪ್ರೌಢ ಶಾಲೆ ಬಳಿ ಮರವೊಂದರ ಟೊಂಗೆಯಲ್ಲಿ ಹೆಜ್ಜೇನು ಕಟ್ಟಿತ್ತು. ಇದನ್ನು ಗಮನಿಸಿದ ಮಂಗಗಳ ಹಿಂಡು ಬೆಳಗ್ಗೆ 10.30ರ ಸುಮಾರಿಗೆ ಅದರ ಮೇಲೆ ಜಿಗಿದಿವೆ. ಇದರಿಂದ ಜೇಣುಗಳು ರೊಚ್ಚಿಗೆದ್ದು, ಅಕ್ಕಪಕ್ಕದಲ್ಲಿದ್ದವರನ್ನು ಅಡ್ಡಾಡಿಸಿ ಕಡಿದಿವೆ. ಕೆಲವರು ಹೇಗೋ ತಪ್ಪಿಸಿಕೊಂಡರೆ, ಮತ್ತೆ ಕೆಲವರು ಜೇನುದಾಳಿಗೆ ನಲುಗಿದ್ದಾರೆ. ಗಾಯಗೊಂಡಿದ್ದ ಐವರು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಜ್ಜೇನುಗಳು ಗ್ರಾಮದ ತುಂಬೆಲ್ಲ ಹರಿದಾಡಿದ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಬೈಕ್ ಸವಾರರು, ಹೊಲದಲ್ಲಿದ್ದ ಕೂಲಿಗಳ ಮೇಲೆಯೂ ಜೇನು ದಾಳಿ ನಡೆದಿದೆ. ಶಾಲೆ ರಜೆ ಇದ್ದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net