ಅಕ್ಷಯ ತೃತೀಯ ಆಚರಣೆ ಹಿನ್ನೆಲೆ; ಚಿನ್ನ, ಗೃಹೋಪಯೋಗಿ ವಸ್ತು ಖರೀದಿ

Gold Sale
Published on

ಹಾವೇರಿ : ಅಕ್ಷಯ ತೃತೀಯ ಆಚರಣೆ ಹಿನ್ನೆಲೆ ಬೆಲೆ ಹೆಚ್ಚಳದ ಬಿಸಿಯ ನಡುವೆಯೂ ಜಿಲ್ಲೆಯಲ್ಲಿ ಹಲವೆಡೆ ಚಿನ್ನ ಖರೀದಿಯ ದೃಶ್ಯ ಕಂಡುಬಂತು. ಅಕ್ಷಯ ತೃತೀಯದಂದು ಚಿನ್ನ ಅಥವಾ ಯಾವುದಾದರೂ ವಸ್ತು ಖರೀದಿಸುವ ರೂಢಿ ಹಲವರಲ್ಲಿದೆ. ಹಾಗಾಗಿ, ಜುವೆಲ್ಲರಿ ಶಾಪ್, ಟಿವಿ, ಫ್ರಿಡ್ಜ್, ವಾಶಿಂಗ್ ಮಷಿನ್, ಮತ್ತಿತರ ಗೃಹೋಪಯೋಗಿ ವಸ್ತುಗಳ ಖರೀದಿಗೆ ಮಹಿಳೆಯರು ಮುಂದಾಗಿದ್ದರು. ಇದು ಶಾಲಾ ದಾಖಲಾತಿಯ ಸಮಯ ಆದ್ದರಿಂದ ಕೆಲವರು ತಮ್ಮ ಮಕ್ಕಳನ್ನು ಹೊಸ ಶಾಲೆಗೆ ದಾಖಲಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net