ಅಕ್ಕಿಆಲೂರಲ್ಲಿ ರಿಧಿ ಎಂಬ ಹೆಸರಿನ ನಾಯಿಗೆ ಅದ್ಧೂರಿಯಾಗಿ ಸೀಮಂತ ಕಾರ್ಯ

Akkialur dog
Published on

ಹಾವೇರಿ/ ಅಕ್ಕಿಆಲೂರ : ಅತ್ಯಂತ ಪ್ರೀತಿಯಿಂದ ಸಾಕಿರುವ ಶ್ವಾನಕ್ಕೆ ಕುಟುಂಬ ಸದಸ್ಯರು, ಬಂಧುಗಳು ಸೀಮಂತ ಕಾರ್ಯಕ್ರಮ ಮಾಡುವ ಮೂಲಕ‌ ಗಮನ ಸೆಳೆದರು.

ಹಾನಗಲ್ಲ ತಾಲೂಕು ಅಕ್ಕಿಆಲೂರ ಗ್ರಾಮದ ಪೊಲೀಸ್ ಪೇದೆ, ರಕ್ತಸೈನಿಕ ಕರಬಸಪ್ಪ ಗೊಂದಿ ಕುಟುಂಬದವರು ಸಾಕಿರುವ ರಿಧಿ ಎಂಬ ಹೆಸರಿನ ನಾಯಿಗೆ ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಲಾಯಿತು. ರಿಧಿ ಮದುಮಗಳಂತೆ ಸಿಂಗಾರಗೊಂಡಿತ್ತು.

ಬೊಮ್ಮನಹಳ್ಳಿಯ ಆರ್1 ಡಾಗ್ ಟ್ರೇನಿಂಗ್ ಸ್ಕೂಲ್ ನ ಶ್ವಾನ ಕಾಳಿ, ರಿಧಿಗೆ ಸೀರೆ ಕೊಟ್ಟು ಸೀಮಂತಕ್ಕೆ ಚಾಲನೆ ನೀಡಿತು.

ಈ ಸಂಭ್ರಮದಲ್ಲಿ ಅಕ್ಕಿ ಆಲೂರಿನ ಬಾಬಜಿ ಕುಟುಂಬದ ರೂಬಿ ಮತ್ತು ಬಾಳಂಬಿಡ ಗ್ರಾಮದ ಸಂದೀಪ ರವರ ನಿಕ್ಕಿ ಶ್ವಾನಗಳು ರಿಧಿಗೆ ವಿಶೇಷ ಶುಭಾಶಯಗಳು ತಿಳಿಸಿದರು.

ರತ್ನಾ ಹೂಗಾರ ಮತ್ತು ಸಂಗಡಿಗರು ಜಾನಪದ ಸೀಮಂತ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಶ್ವಾನ ತರಬೇತುದಾರರು ರಾಷ್ಟ್ರೀಯ ಶ್ವಾನ ಪ್ರದರ್ಶನ ತೀರ್ಪುಗಾರರು ಆದ ರಕ್ತಸೈನಿಕ ರಂಜಿತ್ ಪೂಜಾರಿ ಮತ್ತು ತಂಡ, ಶ್ವಾನ ಸಾಕುದಾರರು ಕುಮಾರಗೌಡ ಪಾಟೀಲ, ಎನ್.ಎಸ್.ಪಾಟೀಲ, ವಿಜಯ ಬಾಬಜಿ, ಶೋಭಾ ಪ್ರಕಾಶ, ಮನೋಹರ ಗೊಂದಿ, ಸೋಮೇಶ ಗುಡ್ಡದ, ವಿಜಯ ತಿರಕಣ್ಣನವರ, ಪ್ರಶಾಂತ ಹತ್ತಿ, ಮಂಜುಳಾ‌ ಹುಲಗೂರ, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net