

ಹಾವೇರಿ: ಹುಕ್ಕೇರಿ ಮಠದ ಅಕ್ಕನ ಬಳಗದ ವತಿಯಿಂದ ನಗರದ ಅಕ್ಕನ ಬಳದ ಸಭಾಂಗಣದಲ್ಲಿ ಭಾನುವಾರ ಗೌರಿ ಹುಣ್ಣಿಮೆ ಅಂಗವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ನಾಗರಿಕ ವೇದಿಕೆ ಹಾಗೂ ಶ್ರೀ ಚೌಡೇಶ್ವರಿ ಮಹಿಳಾ ಮಂಡಲ ಹಾಗೂ ಹುಕ್ಕೇರಿ ಮಠದ ಅಕ್ಕನ ಬಳಗದ ತಾಯಂದಿರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚುಕ್ಕಿ ಇಂದ ರಂಗೋಲಿ ಬಿಡಿಸುವ ಸ್ಪರ್ಧೆಯ ನಿರ್ಣಾಯಕರಾಗಿ ಹುಕ್ಕೇರಿ ಮಠದ ಜಿ.ಎನ್.ಚಟ್ಟಮ್ಮನವರ, ಮಹಾಂತೇಶ ಹಿರೇಮಠ ಭಾಗವಹಿಸಿದ್ದರು.
15 ತಾಯಂದಿರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶೋಭಾ ನೆಜ್ಕರ್ ಪ್ರಥಮ ಬಹುಮಾನ, ಮಹಾಂತಮ್ಮ ಶೀಲವಂತರಗೆ ದ್ವಿತೀಯ ಬಹುಮಾನ ಹಾಗೂ ಪ್ರತಿಭಾ ಶೀಲವಂತರೆ ತೃತೀಯ ಬಹುಮಾನ ಪಡೆದರು. ಹರ್ಷಿತಾ ಪಾವಲಿ ಸಮಾಧಾನಕರ ಬಹುಮಾನ ಪಡೆದರು.
ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಹಾಗೂ ಗೌರವಾಧ್ಯಕ್ಷೆ ಅಮೃತಮ್ಮ ಶೀಲವಂತರ, ಲಲಿತಮ್ಮ ಹೊರಡಿ, ಸುರೇಖಾ ಮಳಗಿ, ಲಲಿತಮ್ಮ ಅಂಕಲಕೋಟಿ, ಪುಷ್ಪಾ ಸಾತೇನಹಳ್ಳಿ, ಹೇಮಾ ಮುದ್ದಿ, ವನಿತಾ ಮಾಗನೂರ, ಇತರರು ಪಾಲ್ಗೊಂಡಿದ್ದರು.