ಹುಕ್ಕೇರಿಮಠದ ಅಕ್ಕನ ಬಳಗದ ವತಿಯಿಂದ ರಾಮನ ಹಾಡುಗಳ ಭಜನೆ

24 HVR 4
Published on

ಹಾವೇರಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹಾವೇರಿಯ ಎಂಜಿ ರಸ್ತೆಯ ಅಕ್ಕಮಹಾದೇವಿ ಹಾಗೂ ಆಂಜನೇಯ ದೇವಸ್ಥಾನದಲ್ಲಿ ಹುಕ್ಕೇರಿಮಠದ ಅಕ್ಕನ ಬಳಗದ ವತಿಯಿಂದ ಸೋಮವಾರ ಶ್ರೀರಾಮ ನಾಮ ಪಠಿಸಲಾಯಿತು. ಹನುಮಾನ್ ಚಾಲಿಸಾ, ರಾಮನ ಹಾಡುಗಳ ಭಜನೆ ಮಾಡಲಾಯಿತು. ವಿಶೇಷ ಪೂಜೆ ನಂತರ ಪ್ರಸಾದ ವಿತರಿಸಲಾಯಿತು. ಬಾಲರಾಮನ ವೇಷದಲ್ಲಿ ಬಾಲಕಿ ಕೃತಿ ಗಾಜೀಪುರ ಕಂಗೊಳಿಸಿದರು. ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ, ಗೌರಾಧ್ಯಕ್ಷೆ ಅಮೃತಮ್ಮ ಶೀಲವಂತರ, ಕಸ್ತೂರೆಮ್ಮ, ಶಶಿಕಲಾ ತುರಮರಿ, ಲಲಿತಾ ಅಂಕಲಕೊಟಿ, ವನಿತಾ ಮಾಗನೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net