ಮುಳ್ಳುಸಜ್ಜೆ ಔಷಧಕ್ಕೆ ಮುಗಿಬಿದ್ದ ರೈತರು

2 Mullu Sajje
Published on

ಹಾವೇರಿ: ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಜತೆಗೆ ಕಂಟಕವಾಗಿ ಬೆಳೆಯುತ್ತಿರುವ ಮುಳ್ಳುಸಜ್ಜೆ ಕಳೆಗೆ ಔಷಧ ನೀಡುವಂತೆ ನೂರಾರು ರೈತರು ನಗರದ ಆಗ್ರೋ ಸೆಂಟರ್ ಒಂದರ ಎದುರು ಬುಧವಾರ ಮುಗಿಬಿದ್ದರು.

ನಗರದ ಹಾನಗಲ್ಲ ರಸ್ತೆಯ ಶ್ರೀನಿವಾಸ ಆಗ್ರೋ ಸೆಂಟರ್ ಮಾಲೀಕರು ಮುಳ್ಳು ಸಜ್ಜೆ ಕಳೆಗೆ ಔಷಧ ಲಭ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದರು‌. ಹಲವರು ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದರು. ಇದನ್ನು ನೋಡಿದ ಹಲವು ರೈತರು ದಾವಣಗೆರೆ, ಧಾರವಾಡ, ಬಳ್ಳಾರಿ ಇತರ ಭಾಗಗಳಿಂದ ಬೆಳಗ್ಗೆಯಿಂದಲೇ ಜಾಯಿಸುತ್ತಿದ್ದರು.

ಆದರೆ ಅಂಗಡಿ ಮಾಲೀಕ ಅಂಗಡಿ ಬಂದ್ ಮಾಡಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ನೂರಾರು ರೈತರು ಅಂಗಡಿ ಎದುರು ಕೆಲಕಾಲ ಪ್ರತಿಭಟನೆ ಮಾಡಿದರು. ಔಷಧ ಬೇಕೇ ಬೇಕು. ಇದಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net