ಅಗ್ನಿವೀರ್ ನೇಮಕಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ

Published on

ಹಾವೇರಿ: ಮಂಗಳೂರಿನ ಭಾರತೀಯ ಸೇನಾ ನೇಮಕಾತಿ ಕಚೇರಿಯಿಂದ ಅಗ್ನಿಪಥ್ ಯೋಜನೆಯಡಿ 2024-25ನೇ ಸಾಲಿನ ಅಗ್ನಿವೀರ್ ಸೇವೆಗಾಗಿ ಆಯ್ಕೆಯಾಗಲು ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಸೇರಿ ಇತರ ಜಿಲ್ಲೆಗಳ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾರ್ಚ್ 22ರವರೆಗೆ ನೋಂದಾಯಿಸಿಕೊಳ್ಳಬಹುದು. ಏಪ್ರಿಲ್ 22ರ ನಂತರ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಅರ್ಹತೆ ಹೊಂದಿದದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು. ಮೂರನೇ ಹಂತದಲ್ಲಿ ಹೊಂದಾಣಿಕೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗವುದು. ಕ್ರೀಡಾಪಟುಗಳಿಗೆ, ಎನ್.ಸಿ.ಸಿ. ಪ್ರಮಾಣಪತ್ರ ಹೊಂದಿದವರಿಗೆ, ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರಿಗೆ ಬೋನಸ್ ಅಂಕಗಳನ್ನು ನೀಡಲಾಗುವುದು.
ಮದ್ಯವರ್ತಿಗಳ ಮಾತುಗಳು, ಆಮಿಷಕ್ಕೆ ಒಳಗಾಗಬೇಡಿ. ಆಸಕ್ತರು ಭಾರತೀಯ ಸೇನಾ ಪಡೆಯ ಅಧಿಕೃತ ಜಾಲತಾಣ www.joinindianarmy.nic.in ಕ್ಕೆ ಭೇಟಿ ಕೊಡಿ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net