ನೇಮಕಾತಿ ಪ್ರಕ್ರಿಯೆ 17ರಿಂದ

3-HVR-AGNIVEER
Published on

ಹಾವೇರಿ: ಭಾರತ ಸರ್ಕಾರದ ಸಶಸ್ತ್ರ ಪಡೆಗಳಲ್ಲಿ ಒಂದಾದ ಅಗ್ನಿವೀರರ ನೇಮಕಾತಿ ರ‌್ಯಾಲಿ ಜು.17ರಿಂದ 25ರವರೆಗೆ ಉಡುಪಿ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜರುಗಲಿದೆ. ರ‌್ಯಾಲಿಯಲ್ಲಿ ಭಾಗವಹಿಸಲು ಈಗಾಗಲೇ ಆನ್‌ಲೈನ್‌ನಲ್ಲಿ 11 ಜಿಲ್ಲೆಯ 6,222 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಜು.17ರಂದು ಚಿಕ್ಕಮಗಳೂರು ಜಿಲ್ಲೆಯ 41, ಉಡುಪಿ ಜಿಲ್ಲೆಯ 59, ದಕ್ಷಿಣ ಕನ್ನಡ ಜಿಲ್ಲೆಯ 88, ದಾವಣಗೆರೆ ಜಿಲ್ಲೆಯ 91, ಶಿವಮೊಗ್ಗ ಜಿಲ್ಲೆಯ 92, ಹಾವೇರಿ ಜಿಲ್ಲೆಯ 294 ಅಭ್ಯರ್ಥಿಗಳು ಸೇರಿ 665 ಅಭ್ಯರ್ಥಿಗಳ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ www.joinindianarmy.nic.in ವೆಬ್‌ಸೈಟ್ ವೀಕ್ಷಿಸಬಹುದು ಎಂದು ಮಂಗಳೂರು ಸೇನಾ ನೇಮಕಾತಿ ಕಚೇರಿಯ ನೇಮಕಾತಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net