ಬದುಕಿನ ಮೌಲ್ಯ ತಿಳಿಸುವ ವೃತ್ತಿ ಶಿಕ್ಷಕ ವೃತ್ತಿ; ಅಗಡಿಯಲ್ಲಿ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀ ಗುರುದತ್ತ ಮೂರ್ತಿ ಹೇಳಿಕೆ

15 HVR 3 B
Published on

ಹಾವೇರಿ: ತಾಯಿಯಿಂದ ಉಸಿರು ಬರುತ್ತದೆ. ತಂದೆಯಿಂದ ಹೆಸರು ಬರುತ್ತದೆ. ಆದರೆ, ಗುರುವಿಂದ ಉಸಿರಿರುವವರೆಗೂ ಹೆಸರು ಬರುವ ವಿದ್ಯೆ ಬರುತ್ತದೆ. ಬದುಕಿನ ಮೌಲ್ಯ ತಿಳಿಸುವ ವೃತ್ತಿ ಶಿಕ್ಷಕ ವೃತ್ತಿ. ಇದರಷ್ಟು ಪವಿತ್ರವಾದ ವೃತ್ತಿ ಇನ್ನೊಂದಿಲ್ಲ ಎಂದು ಶ್ರೀಕ್ಷೇತ್ರ ಆನಂದವನದ ಗುರುದತ್ತ ಮೂರ್ತಿ ಚಕ್ರವರ್ತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ಶ್ರೀಶೇಷಾಚಲ ಸದ್ಗುರು ಪ್ರೌಢಶಾಲೆಯಲ್ಲಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ 1993ರಿಂದ 2003ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಆಯೋಜಿಸಿದ್ದ ಗುರುವಂದನೆ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿ ಹುಟ್ಟಿದ ಮೇಲೆ ಹೆತ್ತವರ, ಶಿಕ್ಷಕರ ಹಾಗೂ ಸಮಾಜದ ಋಣ ತೀರಿಸಬೇಕು ಎಂದರು.
ಸಮಾರಂಭದಲ್ಲಿ 25 ಶಿಕ್ಷಕರನ್ನು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯ ರಾಘವೇಂದ್ರ ನಾಡಿಗೇರ, ಹನುಮಂತಗೌಡ ಗೊಲ್ಲರ, ವಿ.ವಿ.ಕಮತರ, ಎಸ್.ಎಸ್.ಲೂತಿಮಠ, ಕೆ.ಎಸ್.ಮಂಜುನಾಥ, ಸುಮಂಗಲ ಗಾಣಿಗೇರ, ರಾಘವೇಂದ್ರ ಈಳಿಗೇರ, ಚಂದ್ರು ಈಳಿಗೇರ, ಶಿವಪ್ಪ ಡಂಬರಮತ್ತೂರ, ಶೈಲಜಾ ಕೋರಿಶೆಟ್ಟರ, ನಿಜಲಿಂಗಪ್ಪ, ಡಾ.ಸುನೀಲ ಹರಪನಹಳ್ಳಿ, ಮಂಜುನಾಥ ಕೆ.ಎಸ್, ಇತರರಿದ್ದರು.
ಪೂರ್ಣಿಮಾ ಆನ್ವೇರಿ, ಮಂಜುಳಾ ಮಾಳದಕರ, ಅನ್ನಪೂರ್ಣ ಪ್ರಾರ್ಥಿಸಿದರು. ದೀಪಾ ಜಂಗಲಿ ಸ್ವಾಗತಿಸಿದರು, ದಿಳ್ಳೆಪ್ಪ ಕುರುಬರ ಪ್ರಸ್ತಾವಿಕವಾಗಿ ಮಾತನಾಡಿದರು, ತ್ರಿವೇಣಿ ಬಸೇಗೆಣ್ಣಿ, ರಾಮಾ ಚಕ್ರವರ್ತಿ ನಿರೂಪಿಸಿದರು.
ಕುಣಿದು ಕುಪ್ಪಳಿಸಿದರು :
ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗಾಗಿ ವಿಶೇಷ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಹಾಸ್ಯ ಭಾಷಣ, ನೃತ್ಯ, ಗಾಯನ, ಜಾನಪದ ಗೀತೆ, ನೃತ್ಯ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net