ಹಾವೇರಿ: ಹಾನಗಲ್ಲ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಪಂಚಾಕ್ಷರಿ ಮಠದ ಎದುರು ಹಾಡಹಗಲೇ ವಿಕೃತಕಾಮಿಯೊಬ್ಬ ಗೋವಿನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಆಡೂರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಕಾಡಶೆಟ್ಟಿಹಳ್ಳಿ ನಿವಾಸಿ ಖಾಸೀಂಸಾಬ ಇಮಾಮಸಾಬ ಡೊಳ್ಳೇಶ್ವರ ಗೋವಿನ ಮೇಲೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪಿ.
ಜೂ.30ರಂದು ಮಧ್ಯಾಹ್ನ 12.30ರ ಸುಮಾರು ಗ್ರಾಮದ ಹಿಂದುಗಳ ಪವಿತ್ರ ಸ್ಥಳ ಪಂಚಾಕ್ಷರಿ ಮಠದ ಎದುರು ನಿಂತಿದ್ದ ಗೋವಿನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈತ ಉದ್ದೇಶಪೂರ್ವಕವಾಗಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟುಮಾಡಲು ಕೃತ್ಯ ಎಸಗಿದ್ದಾನೆ. ಗೋಮಾತೆ ಎಂದು ಪೂಜಿಸುವ ಆಕಳ ಮೇಲೆ ಕ್ರೌರ್ಯ ಮೆರೆದು ಅಪವಿತ್ರಗೊಳಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಗ್ರಾಮಸ್ಥರು ಖಾಸೀಂಸಾಬ ವಿರುದ್ಧ ಆಡೂರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
ಮಠದ ಹೆಸರಲ್ಲಿ ಬಿಟ್ಟಿದ್ದ ಗೋವು
ಗ್ರಾಮದ ಪಂಚಾಕ್ಷರಿ ಮಠದ ಹೆಸರಲ್ಲಿ ಎರಡು ಗೋವುಗಳನ್ನು ಸಾಕಲಾಗಿದೆ. ಗ್ರಾಮದಲ್ಲಿ ಹುಲ್ಲು ಸೇವಿಸಿಕೊಂಡು ಓಡಾಡಿಕೊಂಡಿದ್ದವು ಎಂದು ದೂರಿನಲ್ಲಿ ದಾಖಲಾಗಿದೆ.