ಗಾಯಕ್ಕೆ ಫೆವಿಕ್ವಿಕ್ ಹಚ್ಚಿದ ನರ್ಸ್ ರಜೆ ಸಜೆ; ಅಮಾನತು ಮಾಡಲು ಮೀನಮೇಷ ?

Adur Fivikvick
Published on

ಹಾವೇರಿ: ಹಾನಗಲ್ಲ ತಾಲೂಕಿನ ಆಡೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಲಕನ ಕೆನ್ನೆಯ ಗಾಯಕ್ಕೆ ಫೆವಿಕ್ವಿಕ್ ಹಚ್ಚಿ ಚಿಕಿತ್ಸೆ ನೀಡಿದ ನರ್ಸ್‌ಗೆ ಆರೋಗ್ಯ ಇಲಾಖೆ ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ. ಅಮಾನತು ಮಾಡಲು ಇಲಾಖೆ ಮೀನಮೇಷ ಎಣಿಸುತ್ತಿದೆ.

ಜ.14ರಂದು ಗುರುಕಿಶನ್ ಹೊಸಮನಿ ಎಂಬ ಬಾಲಕ ಆಟವಾಡುವಾಗ ಕೆನ್ನೆಯ ಮೇಲೆ ಗಾಯ ಮಾಡಿಕೊಂಡಿದ್ದ. ಈ ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡುವ ಬದಲಿಗೆ ನರ್ಸ್ ಜ್ಯೋತಿ ಫೆವಿಕ್ವಿಕ್ ಗಮ್ ಅಂಟಿಸಿ ಚಿಕಿತ್ಸೆ ನೀಡಿದ್ದರು. ಈ ಕುರಿತು ಪಾಲಕರು ಆಡೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದರು.

ಈ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಫೆ.5ರಂದು ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಿ ಕೂಡಲೇ ನರ್ಸ್ ಅಮಾನತು ಮಾಡುವಂತೆ ಡಿಎಚ್‌ಒಗೆ ಸೂಚಿಸಿದ್ದರು. ಅಮಾನತು ಮಾಡುವ ಅಧಿಕಾರ ನನಗಿಲ್ಲ. ಹಾಗಾಗಿ, ಅಮಾನತು ಮಾಡುವಂತೆ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಅಮಾನತು ಮಾಡುವಂತೆ ಸವಿವರವಾದ ಪತ್ರ ಬರೆದಿದ್ದೇನೆ. ಆದೇಶಕ್ಕಾಗಿ ಕಾಯುತ್ತಿದ್ದೇನೆ. ಆದೇಶ ಬರುವವರೆಗೆ ನರ್ಸ್‌ಗೆ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಆದೇಶ ಬಂದ ಕೂಡಲೇ ಕ್ರಮ ಜರುಗಿಸಲಾಗುವುದು ಎಂದು ಡಿಎಚ್‌ಒ ಡಾ.ರಾಜೇಶ ಸುರಗಿಹಳ್ಳಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net