ಕನಕಾಪುರದಲ್ಲಿ ಉಚಿತ ನಾಡಿಮಿಡಿತ ತಪಾಸಣೆ; ಆದಿವಾಸಿ ಅರ್ಜುನ ರಾಜ್ ಮುಖಿಯಾ

5 Adivasi Arjun Raj Mukhiya
Published on

ಹಾವೇರಿ: ಮಧ್ಯಪ್ರದೇಶ ಮೂಲದ ಆಂದ್ರಪ್ರದೇಶದ ಆದಿವಾಸಿ ಜನಾಂಗದಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ನಾಡಿಮಿಡಿತ ತಪಾಸಣೆ ಹಾಗೂ ನಾಟಿ ಔಷಧ ಪದ್ಧತಿಯನ್ನು ತಾವು ಮುಂದುವರೆಸಿಕೊಂಡು ಬಂದಿದ್ದು, ತಾಲೂಕಿನ ಕನಕಾಪುರ ಗ್ರಾಮದಲ್ಲಿ ಕೆಲ ತಿಂಗಳವರೆಗೆ ಉಚಿತ ನಾಡಿಮಿಡಿತ ತಪಾಸಣೆ ನಡೆಸಲಾಗುವುದು ಎಂದು ಆದಿವಾಸಿ ಅರ್ಜುನ ರಾಜ್ ಮುಖಿಯಾ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಈಗ 75 ವರ್ಷ ವಯಸ್ಸು, ನನ್ನ ಪೂರ್ವಜರಿಂದ ಕಲಿತ ನಾಡಿಮಿಡಿತ, ಗಿಡಮೂಲಿಕೆ ಔಷಧಗಳಿಂದ ಮಂಡಿನೋವು, ಸಂದಿವಾತ, ಡಿಸ್ಕ್ ಸಮಸ್ಯೆ, ಬೆನ್ನು ನೋವು, ಅಸ್ತಮಾ, ಗ್ಯಾಸ್‌ಸ್ಟ್ರಿಕ್, ಎಸಿಡಿಟಿ, ಹಲ್ಸರ್, ತಲೆನೋವು, ಮೈಗ್ರೇನ್, ಪೈಲ್ಸ್, ಸಂತಾನಹೀನತೆ, ಇತರ ಕಾಯಿಲೆಗಳಿಗೆ ಔಷಧ ಕೊಡುತ್ತೇವೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ, ಗಣ್ಯರು ಈ ಔಷಧವನ್ನು ಪಡೆದು ಗುಣಮುಖರಾಗಿದ್ದಾರೆ. ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ ಎಂದರು.

ಕನಕಾಪುರದಲ್ಲಿ ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಹಾಗೂ ಸಂಜೆ 4ರಿಂದ 6ರವರೆಗೆ ಲಭ್ಯವಿದ್ದು, ಮೊದಲಿಗೆ ನಾಡಿ ಮಿಡಿತ ಪರಿಶೀಲಿಸುತ್ತೇವೆ. ಇದರಿಂದ ಅವರ ದೇಹದ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ನಂತರ ಪರಿಹಾರ ಬೇಕು ಎಂದವರಿಗೆ ರಿಯಾಯ್ತಿ ದರದಲ್ಲಿ ಔಷಧ ಕೊಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಾಗರಾಜ ಮುಖಿಯಾ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net