

ಹಾವೇರಿ: ಎಡಿಜಿಪಿ (ಸಿಟಿಆರ್‌ಎಸ್) ಅಲೋಕ್‌ಕುಮಾರ್ ಅವರು ದಾವಣಗೆರೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಹಾಗೂ ಇತರ ಅಧಿಕಾರಿಗಳೊಂದಿಗೆ ಅಪಘಾತ ನಡೆದ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಅಪಘಾತ ತಡೆ ಕುರಿತು ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದರು. ಅಲ್ಲಲ್ಲಿ ಅಗತ್ಯ ಸೂಚನಾ ಫಲಕ ಅಳವಡಿಸಿ, ರಾತ್ರಿ ವೇಳೆ ವಾಹನ ಚಾಲನೆ ಹಾಗೂ ಅತಿಯಾದ ವೇಗದ ಬಗ್ಗೆ ಟೋಲ್ ಬೂತ್‌ಗಳಲ್ಲಿ ಜಾಗೃತಿ ಮೂಡಿಸಿ. ಅತಿಯಾದ ವೇಗದ ಚಾಲನೆ ಹಾಗೂ ಡ್ರಂಕ್ ಆ್ಯಂಡ್ ಡ್ರೈವ್ ಕುರಿತು ವಿಶೇಷ ಅಭಿಯಾನ ನಡೆಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಸ್‌ಪಿ ಅಂಶುಕುಮಾರ, ಎಎಸ್‌ಪಿ ಸಿ.ಗೋಪಾಲ, ಇತರರಿದ್ದರು.
ಲಾರಿ ಚಾಲಕ, ಕ್ಲೀನರ್ ಬಂಧನ
ಸಕ್ಕರೆ ತುಂಬಿದ್ದ ಲಾರಿ ನಿಪ್ಪಾಣಿಯ ಸಕ್ಕರೆ ಫ್ಯಾಕ್ಟರಿ ಒಂದರಿಂದ ಸಕ್ಕರೆ ಚೀಲಗಳನ್ನು ತುಂಬಿಕೊಂಡು ಚಿಕ್ಕಮಗಳೂರು ಕಡೆಗೆ ಹೊರಟಿತ್ತು. ಈ ವೇಳೆ ಯಾವುದೋ ಕಾರಣಕ್ಕೆ ರಸ್ತೆ ಮೇಲೆ ನಿಲ್ಲಿಸಿದ್ದರು. ಈ ಲಾರಿ ಚಿಕ್ಕಮಗಳೂರಿನ ರಾಕೇಶ ಶೆಟ್ಟಿ ಎಂಬುವರಿಗೆ ಸೇರಿದೆ. ಚಾಲಕರ ರಮೇಶ ಎಚ್.ಟಿ. ಹಾಗೂ ಕ್ಲೀನರ್ ಪ್ರಜ್ವಲ್ ಸಿ.ಎನ್. ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.