ಎನ್‌ಪಿಸಿಐ, ಆಧಾರ್ ಜೋಡಣೆ ಕಡ್ಡಾಯ

Published on

ಹಾವೇರಿ: ಕಂದಾಯ ಇಲಾಖೆಯಿಂದ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ, ರೈತರ ಆತ್ಮಹತ್ಯೆ ಯೋಜನೆಗಳಡಿ ಮಾಶಾಸನ ಪಡೆಯುತ್ತಿರುವ ಪಿಂಚಣಿದಾರರು ತಾವು ಹೊಂದಿರುವ ಎಸ್‌ಬಿ ಖಾತೆಗೆ ಅ.20ರೊಳಗಾಗಿ ಎನ್‌ಪಿಸಿಐ ಮತ್ತು ಆಧಾರ್ ಜೋಡಣೆ(ಇ-ಕೆವೈಸಿ) ಕಡ್ಡಾಯವಾಗಿ ಮಾಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದ್ದಾರೆ.
ವಿವಿಧ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ, ಆಧಾರ್‌ನೊಂದಿಗೆ ಜೋಡಣೆಯಾಗಿರುವ ಸಂಖ್ಯೆಯ ಮೊಬೈಲ್‌ನೊಂದಿಗೆ ತಾವು ಎಸ್.ಬಿ.ಖಾತೆ ಹೊಂದಿರುವ ಬ್ಯಾಂಕುಗಳಿಗೆ ಖುದ್ದಾಗಿ ಹಾಜರಾಗಿ ಎನ್‌ಪಿಸಿಐ ಮತ್ತು ಆಧಾರ್ ಜೋಡಣೆ (ಇ-ಕೆವೈಸಿ) ಮಾಡಿಸಬೇಕು. ತಪ್ಪಿದಲ್ಲಿ ತಮ್ಮ ಮಾಶಾಸನವು ನವೆಂಬರ್ ತಿಂಗಳಿನಿಂದ ಸ್ವಯಂಪ್ರೇರಿತವಾಗಿ ರದ್ದಾಗುವುದು. ಈಗಾಗಲೇ ಆಧಾರ್ ಮತ್ತು ಎನ್‌ಪಿಸಿಐ ಜೋಡಣೆ ಮಾಡಿಸಿಕೊಂಡವರಿಗೆ ಈ ಪ್ರಕಟಣೆ ಅನ್ವಯಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net