

ಹಾವೇರಿ: ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾಚಿದೇವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಡಿಡಿಪಿಯು ಡಾ.ಉಮೇಶಪ್ಪ ಎಚ್., ಈಶ್ವರಮ್ಮ ಮಡಿವಾಳರ, ನರಸಪ್ಪ ಮಡಿವಾಳರ, ಚನ್ನವೀರಪ್ಪ ಮಡಿವಾಳರ, ಸತೀಶ ಮಡಿವಾಳರ, ಇತರರಿದ್ದರು.