ಹಾವೇರಿ: ಅತಿವೃಷ್ಟಿ, ನೆರೆ ಹಾಗೂ ಪ್ರವಾಹದಿಂದ ಉಂಟಾಗುವ ಪರಿಸ್ಥಿತಿ ಕುರಿತು ಜಾಗೃತಿ, ಪ್ರಕೃತಿ ವಿಕೋಪ ನಿರ್ವಹಣೆ ತರಬೇತಿ ಹಾಗೂ ಅಣುಕು ಪ್ರದರ್ಶನ ಡಿ.30ರಿಂದ ಜ.15ರವರೆಗೆ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್(ಎನ್.ಡಿ.ಆರ್.ಎಫ್) ಆರ್.ಆರ್.ಸಿ. 10 ಬೆಟಾಲಿಯನ್ ಕಮಾಂಡೆಂಟ್ ತಂಡದಿಂದ ಜಿಲ್ಲೆಯಲ್ಲಿ ಜರುಗಲಿದೆ.
ಡಿ.30ರಂದು ರಾಣೆಬೆನ್ನೂರ ತಾಲೂಕು ಕುಮಾರಪಟ್ಟಣಂ ಗ್ರಾಸೀಂ ಇಂಡ್‌ಸ್ಟ್ರೀಸ್ ಹಾಗೂ ರಾಣೆಬೆನ್ನೂರ ಆರ್.ಟಿ.ಇ.ಎಸ್ ಕಾಲೇಜ್‌ನಲ್ಲಿ, ಡಿ.31ರಂದು ರಟ್ಟಿಹಳ್ಳಿ ಪ್ರಿಯದರ್ಶಿನಿ ಪಿಯು ಕಾಲೇಜ್, ಜ.1ರಂದು ಮಾಸೂರ ಬಿ.ಟಿ.ಪಾಟೀಲ ಹೈಸ್ಕೂಲ್, ಜ.2ರಂದು ಹಿರೇಕೆರೂರ ಸರ್ಕಾರಿ ಪಿಯು ಕಾಲೇಜ್, ಜ.3ರಂದು ಸವಣೂರ ಸಿಂಧೂರ ಪಿಯು ಕಾಲೇಜ್, ಜ.4ರಂದು ಹಾನಗಲ್ಲ ತಾಲೂಕು ಪ್ರವಾಹ ಸಂಭವಿಸುವ ರಸ್ತೆ, ಸೇತುವೆ ಭೇಟಿ, ಜ.6ರಂದು ಅಕ್ಕಿಆಲೂರು ಎಚ್.ಟಿ.ಇ.ಎಸ್ ಪಿಯು ಕಾಲೇಜ್, ಜ.7ರಂದು ಗಾಂಧಿಪುರ ಪಿಯು ಕಾಲೇಜ್, ಜ.8ರಂದು ಹಾವೇರಿ ನಗರದ ಜಿ.ಎಚ್. ಕಾಲೇಜ್, ಜ.9ರಂದು ತಡಸ ಸರ್ಕಾರಿ ಪಿಯು ಕಾಲೇಜ್, ಜ.10ರಂದು ಬಂಕಾಪುರ ಸರ್ಕಾರಿ ಪಿಯು ಕಾಲೇಜ್ ಹಾಗೂ ಶಿಗ್ಗಾಂವಿ ಕೈಗಾರಿಕಾ ಪ್ರದೇಶ ಭೇಟಿ, ಜ.13ರಂದು ಬೆಳಗ್ಗೆ 10 ಗಂಟೆಗೆ ತಹಸೀಲ್ದಾರ್ ಕಚೇರಿ ಹಾಗೂ ಮಧ್ಯಾಹ್ನ 3 ಗಂಟೆಗೆ ಕಲೆಕ್ಟರ್ ಕಚೇರಿ, ಜ.15ರಂದು ಬೆಳಗ್ಗೆ ತಹಸೀಲ್ದಾರ್ ಕಚೇರಿ ಹಾಗೂ ಮಧ್ಯಾಹ್ನ 3 ಗಂಟೆಗೆ ಕಲೆಕ್ಟರ್ ಕಚೇರಿಯಲ್ಲಿ ಜರುಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಲ್.ನಾಗರಾಜ ತಿಳಿಸಿದ್ದಾರೆ.