ಪಡ್ಡು ಮಾರಿ ಜೀವನ ಕಟ್ಟಿಕೊಂಡಿದ್ದರು; ಮುಗಿಲು ಮುಟ್ಟಿದ ಆಕ್ರಂದನ

24 HVR 4
Published on

ಹಾವೇರಿ: ರಾಣೆಬೆನ್ನೂರ ಹೊರವಲಯ ಹಲಗೇರಿ ಕ್ರಾಸ್ ಬ್ರಿಡ್ಜ್ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟ ಸುರೇಶ ಜಾಡಿ ಕುಟುಂಬಸ್ಥರು ಹಾವೇರಿ ಬಸ್ ನಿಲ್ದಾಣದ ಬಳಿ ಪಡ್ಡು ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದರು.
ಕಳೆದ 20 ವರ್ಷಗಳ ಹಿಂದೆ ಹಾವೇರಿ ನಗರಕ್ಕೆ ಆಗಮಿಸಿದ ಸುರೇಶ ಅವರು ಶ್ರದ್ಧೆಯಿಂದ ಬೀದಿಬದಿ ವ್ಯಾಪಾರ ಮಾಡುತ್ತ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಂತರ ಪರಿಶ್ರಮದಿಂದ ಅಶ್ವಿನಿ ನಗರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ಇತರರಿಗೆ ಮಾದರಿ ಎನಿಸಿದ್ದರು. ಎಲ್ಲರೊಂದಿಗೆ ಅತ್ಯಂತ ಸ್ನೇಹಮಯವಾಗಿ ಇರುತ್ತಿದ್ದರು. ಹಿಂದಿನ ದಿನ ಸುರೇಶ ಅವರ ಮೊಮ್ಮಗಳು ಚೇತನಾಳ ಆಟ, ನಗು ಕಂಡಿದ್ದ ಸ್ಥಳೀಯರು ಆಕೆಯ ಸಾವು ಕಂಡು ಕಣ್ಣೀರಾದರು. ಇಂತಹ ದುರಂತ ನಡೆದಿದ್ದು ಅತೀವ ದುಖಃ ತಂದಿದೆ ಎನ್ನುತ್ತಾರೆ ಸ್ಥಳೀಯರು ಹಾಗೂ ಸಂಬಂಧಿಕರು.
ಮುಗಿಲು ಮುಟ್ಟಿದ ಆಕ್ರಂದನ
ಅಪಘಾತದಲ್ಲಿ ಮೃತಪಟ್ಟ ಸುರೇಶ ಜಾಡಿ, ಪವಿತ್ರಾ ಸಮಗೊಂಡಿ, ಚೇತನಾ ಸಮಗೊಂಡಿ ಮೃತದೇಹ ಹಾವೇರಿಯ ನಿವಾಸಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂತಸದಿಂದ ಕ್ರಿಯಾಶೀಲವಾಗಿದ್ದ ಕುಟುಂಬದ ಮೂವರ ಸಾವು ಕಂಡು ಅಕ್ಕಪಕ್ಕದವರು ಮಮ್ಮಲಮರುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net