

ಹಾವೇರಿ: ಕ್ರೆಡಿಟ್ ಆಕ್ಸಸ್ ಗ್ರಾಮೀಣ ಲಿಮಿಟೆಡ್ ಹಾಗೂ ಕ್ರೆಡಿಟ್ ಆಕ್ಸಸ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ನಗರದ ಎಸ್‌ಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಆರು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಬಿಪಿಎಲ್ ಕಾರ್ಡ್ ಹೊಂದಿದ ಬಡ ಕುಟುಂಬದಿಂದ ಬಂದಿರುವ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು ಎಂದು ಹಾವೇರಿ ಶಾಖಾ ವ್ಯವಸ್ಥಾಪಕ ಮಾಲತೇಶ ಎಚ್.ಎಂ. ತಿಳಿಸಿದ್ದಾರೆ.
ಸಂಸ್ಥೆಯ ಬೆಳಗಾವಿ ವಿಭಾಗದ ಮ್ಯಾನೇಜರ್ ರವಿ ಎಸ್.ಎನ್., ದಾವಣೆಗೆರೆ ಪ್ರಾದೇಶಿಕ ವ್ಯವಸ್ಥಾಪಕ ಸಚಿನಕುಮಾರ ಎಂ.ಆರ್., ಏರಿಯಾ ಮ್ಯಾನೇಜರ್ ವಿಶ್ವನಾಥ ಜಿ.ವಿ., ಮಲ್ಲಪ್ಪ ಯತ್ನಳ್ಳಿ, ಸಿಬ್ಬಂದಿ ಪಾಲ್ಗೊಂಡಿದ್ದರು.