ಪಿಬಿ ರಸ್ತೆಯಲ್ಲಿ ರಸ್ತೆ ಉಬ್ಬು ಅಳವಡಿಕೆಗೆ ಮನವಿ

14 HVR 3
Published on

ಹಾವೇರಿ: ಜಿಎಚ್ ಕಾಲೇಜ್ ಎದುರಿನ ಪಿಬಿ ರಸ್ತೆಯಲ್ಲಿ ವಾಹನಗಳು ವೇಗವಾಗಿ ಓಡಾಡುವ ಕಾರಣ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ, ಈ ರಸ್ತೆಯಲ್ಲಿ ರಸ್ತೆ ಉಬ್ಬು ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಕಾಲೇಜ್ ಪ್ರಾಂಶುಪಾಲೆ ಸಂಧ್ಯಾ ಕುಲಕರ್ಣಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಸಿದ್ದರಾಮೇಶ ಪಾಟೀಲ, ಸುದೀಪ ಎಂ.ಎನ್., ಕರಬಸ್ಸು ಹಳ್ಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net