

ಹಾವೇರಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶನಿವಾರ ಆಮ್ ಆದ್ಮಿ ಜಿಲ್ಲಾ ಘಟಕದ ಪದಾಧಿಕಾರಿಗಳು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಎಎಪಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ, ಸುಜಾತಾ ಚೌಹಾಣ, ಎಂ.ಎನ್.ನಾಯಕ, ಮೊಹಮ್ಮದ್ ಶಫಿ ಮುಲ್ಲಾ, ಎಂ.ಡಿ.ಖಾಲೆಭಾಗ, ಕುಮಾರಸ್ವಾಮಿ ಹಿರೇಮಠ, ಮೌಲಾಲಿ ಮುಲ್ಲಾ, ಇತರರಿದ್ದರು.