ಜಿಲ್ಲೆಯಲ್ಲಿ ಮಳೆ, ಗಾಳಿ, ಗುಡುಗು ಅಬ್ಬರ; ಬಿಸಿಲಿನ ಝಳಕ್ಕೆ ಬೆಂಡಾಗಿದ್ದ ಮೈಮನ ತಂಪು

Haveri Rain 2
Published on

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಗುರುವಾರ ಗುಡುಗು, ಮಳೆ, ಗಾಳಿಯ ಅಬ್ಬರ ಜೋರಾಗಿತ್ತು. ಬಿಸಿಲಿನ ಝಳಕ್ಕೆ ಬೆಂಡಾಗಿದ್ದ ಹಾವೇರಿ ನಗರದ ಜನತೆಗೆ ಮೊದಲ ಬಾರಿಗೆ ಸುರಿದ ಮಳೆಯಿಂದ ಮೈಮನ ತಂಪಾಯಿತು.
ಹಾವೇರಿ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಒಂದು ತಾಸುಗಳ ಕಾಲ ಮಳೆ ಸುರಿಯಿತು. ಮಳೆ, ಗಾಳಿ, ಮಿಂಚು, ಸಿಡಿಲಿನ ಅಬ್ಬರವೂ ಬಿರುಸು ಪಡೆದಿತ್ತು. ಹಿರೇಕೆರೂರ, ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ, ರಾಣೆಬೆನ್ನೂರ, ಹಾಗೂ ಇತರ ಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆ ಸುರಿದಿದೆ. ಗುತ್ತಲ ಭಾಗದಲ್ಲಿ ಭಾರಿ ಗಾಳಿ ಬೀಸಿತಾದರೂ ಮಳೆರಾಯ ಕೃಎ ತೋರಲಿಲ್ಲ.
ಕಳೆದ ಒಂದು ವರ್ಷದಿಂದ ಮರೆಯಾಗಿದ್ದ ಮಳೆರಾಯ ಕೊನೆಗೂ ಗುರುವಾರ ಕೃಪೆ ತೋರಿದ. ಭೀಕರ ಬರಗಾಲದಿಂದ ತತ್ತರಿಸಿದ್ದ ರೈತರು ನಿಟ್ಟುಸಿರು ಬಿಟ್ಟರು. ಈ ವರ್ಷವಾದರೂ ಉತ್ತಮ ಮಳೆ ಸುರಿಯಲೆಂದು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net