ಕನಕಾಪುರ ಗ್ರಾಪಂನಲ್ಲಿ ಹರ ಘರ್ ತಿರಂಗಾ ಜಾಥಾ

Published on

ಹಾವೇರಿ: ಕನಕಾಪುರ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಆವರಣದಲ್ಲಿ ಮಂಗಳವಾರ ಹರ್ ಘರ್ ತಿರಂಗಾ ಅಭಿಯಾನ ಜಾಥಾ ಆಯೋಜಿಸಲಾಗಿತ್ತು.
ಕನಕಾಪುರ ಗ್ರಾಮದಿಂದ ಪ್ರಾರಂಭವಾದ ಹರ ಘರ್ ತಿರಂಗಾ ಅಭಿಯಾನ ಜಾಥಾ, ಚಿಕ್ಕಲಿಂಗದಹಳ್ಳಿ ಮತ್ತು ಭೂ ಕೋಡಿಹಳ್ಳಿ ಗ್ರಾಮಗಳಲ್ಲಿ ಯಶಸ್ವಿಯಾಗಿ ಜರುಗಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಹಾಲು ಒಕ್ಕೂಟದ ಸಂಘದ ಅಧ್ಯಕ್ಷ ಮತ್ತು ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ, ಗ್ರಾ.ಪಂ. ಸದಸ್ಯರು, ವಿವಿಧ ಸಂಘಗಳ ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮಸ್ಥರು ಜಾಥಾದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net