ರೋಗ ಲಕ್ಷಣವಿದ್ದರೆ ತಕ್ಷಣ ಚಿಕಿತ್ಸೆ ಪಡೆಯಿರಿ

8 DEVDURGA 04
ದೇವದುರ್ಗದ ಮಾಳಗಡ್ಡೆ ಏರಿಯಾದಲ್ಲಿ ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗ ತಪಾಸಣೆ ನಡೆಸಿದರು. ವೈದ್ಯಾಧಿಕಾರಿ ಶಿವಾನಂದ, ಡಾ.ನಿರ್ಮಲಾದೇವಿ, ಆರೋಗ್ಯ ಶಿಕ್ಷಣ ಅಧಿಕಾರಿ ಶಿವಪ್ಪ ಭೂಮನಗುಂಡ, ಗೀತಮ್ಮ, ಸೋಮಪ್ಪ ಇದ್ದರು.
Published on

ದೇವದುರ್ಗ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡಲಿದ್ದು, ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.

ಪಟ್ಟಣದ ಮಾಳಗಡ್ಡೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಸಾಂಕ್ರಾಮಿಕ ರೋಗ ತಡೆಗೆ ಮನೆಮನೆಗೆ ಭೇಟಿ ಅಭಿಯಾನದಲ್ಲಿ ಭಾನುವಾರ ಮಾತನಾಡಿದರು. ಮಳೆಗಾದಲ್ಲಿ ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ನಾನಾ ರೋಗಗಳು ಹರಡುತ್ತವೆ.

ಕೊಳಚೆ ಪ್ರದೇಶ, ಅಲೆಮಾರಿಗಳು ಹೆಚ್ಚಾಗಿ ವಾಸಿಸುವ ಮಾಳಗಡ್ಡೆ, ಯಲ್ಲಲಿಂಗ ಕಾಲನಿಯಲ್ಲಿ ರೋಗಿಗಳು ಹೆಚ್ಚಿದ್ದು, ಮನೆಮನೆಗೆ ತೆರಳಿ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಲನಿ ನಿವಾಸಿಗಳು ಮನೆ, ಸುತ್ತಲಿನ ಪರಿಸರ ಸ್ವಚ್ಛವಿಟ್ಟುಕೊಳ್ಳಬೇಕು. ರಾತ್ರಿ ವೇಳೆ ಸೊಳ್ಳೆ ಪರದೆ ಬಳಸಬೇಕು. ನೀರು ಕಾಯಿಸಿ ಆರಿಸಿ ಕುಡಿಯಬೇಕು. ಯಾವುದೇ ರೋಗಲಕ್ಷಣ ಕಂಡುಬಂದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಮಕ್ಕಳು, ವೃದ್ಧರ ಬಗ್ಗೆ ಕಾಳಜಿವಹಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net