ಗ್ರಾಹಕರ ಮನಮುಟ್ಟುವಂಥ ಕಲ್ಪನೆಗಳಿರಲಿ

h27-IEMS
Published on

ಹುಬ್ಬಳ್ಳಿ: ಇನ್​ಸ್ಟಿಟ್ಯೂಟ್ ಆಫ್ ಎಕ್ಸ್​ಲೆನ್ಸ್ ಇನ್ ಮ್ಯಾನೇಜ್​ವೆುಂಟ್ ಸೈನ್ಸ್, ದೇಶಪಾಂಡೆ ಫೌಂಡೇಷನ್ ಸ್ಟಾರ್ಟಪ್ ಸಹಯೋಗದಲ್ಲಿ ನಗರದ ಐಇಎಂಎಸ್ ಎಂಬಿಎ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬಿ-ಐಡಿಯಾಟಿಕ್ ಬಿಜಿನೆಸ್ ಯೋಜನೆ ಸ್ಪರ್ಧೆಯನ್ನು ಬುಧವಾರ ಏರ್ಪಡಿಸಲಾಗಿತ್ತು.

ಏಕಸ್ ಪ್ರೖೆ.ಲಿ. ಬಿಜಿನೆಸ್ ಎಕ್ಸ್​ಲೆನ್ಸ್​ನ ವ್ಯವಸ್ಥಾಪಕ ನಿರ್ದೇಶಕ ಕಾರ್ತಿಕೇಯನ್ ಸಂತಾನಕೃಷ್ಣನ್ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರ ಕಲ್ಪನೆ ವಿಶೇಷವಾಗಿರಬೇಕು. ಸಾಮಾನ್ಯರು ಊಹಿಸಿರಬಾರದು. ಆದರೆ, ಗ್ರಾಹಕರ ಮನಮುಟ್ಟುವಂತಿರಬೇಕು. ಮಾಲೀಕರಾದವರು ವಿಶೇಷ ಕಲ್ಪನೆಯನ್ನು ಅನುಷ್ಠಾನಕ್ಕೆ ತರಲು ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದರು.

ಹುಬ್ಬಳ್ಳಿಯ ಕೈಜೆನ್ ಎಡ್ಯೂಪ್ಲಸ್ ಸೊಸೈಟಿಯ ಗೌರವಾಧ್ಯಕ್ಷ ಡಾ.ಎನ್.ಎ. ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ನಡೆ-ನುಡಿ, ಆಲೋಚನೆಗಳು ಸಮಾಜಕ್ಕೆ ಮೌಲ್ಯವನ್ನು ತರುವಂತಿರಬೇಕು. ಯಾವುದೇ ಕಲ್ಪನೆಯು ಆರಂಭದಲ್ಲಿ ನಿಕೃಷ್ಟ ಎನಿಸಬಹುದು. ಆದರೆ, ಗ್ರಾಹಕರು ಅದನ್ನು ಒಪ್ಪಿಕೊಂಡಾಗ ಉದ್ಯಮದಲ್ಲಿ ಗೇಮ್ ಚೇಂಜರ್ ಆಗಬಹುದು ಎಂದರು.

ದೇಶಪಾಂಡೆ ಸ್ಟಾರ್ಟಪ್ ಸಿಇಒ ಡಾ. ಕಾರ್ತಿಕ್ ಶಂಕರನ್ ಸಮಾರೋಪದಲ್ಲಿ ಮಾತನಾಡಿ, ವ್ಯಾಪಾರ ಕಲ್ಪನೆಯು ವಾಸ್ತವವಾಗಲು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ. ಅದರ ಅನುಷ್ಠಾನದ ಬಗ್ಗೆ ಸತತವಾಗಿ ಪರಿಶ್ರಮ ಪಟ್ಟಾಗ ಮಾತ್ರ ಯಶಸ್ಸಿನ ಸಿಹಿಯನ್ನು ನೀಡುತ್ತದೆ ಎಂದು ಹೇಳಿದರು.

ಬಹುಮಾನ: ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಎಸ್​ಎಂಎಸ್​ಆರ್ ಕಾಲೇಜ್ ತಂಡವು ಪ್ರಥಮ ಬಹುಮಾನ 5000 ರೂ., ಕೆಎಲ್​ಇ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಕಾಲೇಜ್ ಧಾರವಾಡ ತಂಡವು ದ್ವಿತೀಯ ಬಹುಮಾನ 3000 ರೂ. ಮತ್ತು ಕೆಎಲ್​ಇ ಸಿಬಿಎ(ಬಿಬಿಎ) ತಂಡವು ತೃತೀಯ ಬಹುಮಾನ 2000 ರೂ. ಜತೆಗೆ ಅಭಿನಂದನಾ ಸ್ಮರಣಿಕೆಗಳನ್ನು ಪಡೆದುಕೊಂಡವು. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಅಣ್ಣಿಗೇರಿ ಮತ್ತು ಸಮರ್ಥ ವಾಣಿಜ್ಯ ಕಾಲೇಜ್ ಹುಬ್ಬಳ್ಳಿ ಸಮಾಧಾನಕರ ಬಹುಮಾನ ಪಡೆದವು.

ದೇಶಪಾಂಡೆ ಸ್ಟಾರ್ಟಪ್​ನ ರಕ್ಷಿತ್ ಕಲ್ಯಾಣಿ, ಸುಪ್ರಿಯಾ ವೈದ್ಯ ಮತ್ತು ನಾಗರಾಜ ತೀರ್ಪಗಾರರಾಗಿ ಭಾಗವಹಿಸಿದ್ದರು .

ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಸ್ವಾಗತಿಸಿದರು. ಪ್ರೊ. ವಿನಂತಿ ನಾಯ್ಕ, ಪೊ›. ಅಕ್ಷತಾ ಬಿಳಗಿ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net