

ವಿರಾಜಪೇಟೆ: ಪ್ರತಿಯೊಬ್ಬರೂ ಪ್ರಕೃತಿಯ ಜತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರಬೇಕು ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.
ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ನೇಚರ್ ಕ್ಲಬ್ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯು ಮಾನವನಿಗೆ ಒಂದು ವರವಾಗಿದ್ದು, ಭಾವನಾತ್ಮಕವಾಗಿಯೂ, ಆರೋಗ್ಯದ ದೃಷ್ಟಿಯಿಂದಲೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಪರಿಸರ ಅಧ್ಯಯನವನ್ನು ನಾವು ಪ್ರಾಯೋಗಿಕವಾಗಿ ಅಧ್ಯಯನ ಮಾಡಬೇಕು. ಪರಿಸರದಲ್ಲಿ ನಾವು ಕಲಿಯುವ ಪಾಠವು ಆರೋಗ್ಯವನ್ನು ಉತ್ತಮಪಡಿಸುವುದಲ್ಲದೆ, ಸುಂದರ ಸಮಾಜದ ಸೃಷ್ಟಿಗೂ ಕಾರಣವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮೌಲ್ಯಯುತ ಶಿಕ್ಷಣವನ್ನು ಪಡೆಯಿಬೇಕು ಎಂದು ಕಿವಿಮಾತು ಹೇಳಿದರು.
ಪತ್ರಕರ್ತ, ಬರಹಗಾರರಾರ್ತಿ ಉಷಾ ಪ್ರೀತಂ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ನೇಚರ್ ಕ್ಲಬ್ ಘಟಕದ ಸಂಚಾಲಕಿ ಸೌಮ್ಯಾ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರು, ನೇಚರ್ ಕ್ಲಬ್ ಘಟಕದ ವಿದ್ಯಾರ್ಥಿಗಳು ಇರಿದ್ದರು.