ಜೀವನದಲ್ಲಿ ನಿರ್ದಿಷ್ಟ ಗುರಿ ಇರಲಿ

24 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಯುವ ಜನತೆಯು ಜೀವನದಲ್ಲಿ ನಿರ್ದಿಷ್ಟ ಗುರಿ ಮತ್ತು ಗುರು ಹೊಂದಿರಬೇಕು. ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಸಂಗೀತ ಮತ್ತು ವಿವಿಧ ಕಲೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ವಿದ್ಯೆಗಳು ಜೀವನದ ಪಾಠ ನೀಡುವುದಲ್ಲದೇ ಒಳ್ಳೆ ನಾಗರಿಕನಾಗಿ ಬೆಳೆಯಲು ಉತ್ಸಾಹ ನೀಡುತ್ತವೆ ಎಂದು ಆಕಾಶವಾಣಿ ನಿವೃತ್ತ ಉಪ ಮಹಾನಿರ್ದೇಶಕ ಚೇತನಕುಮಾರ ನಾಯಕ ಹೇಳಿದರು.

ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಿರುವ 33ನೇ ಅಂತರ್​ ಮಹಾವಿದ್ಯಾಲಯಗಳ ಯುವ ಜನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃವಿವಿ ಕುಲಪತಿ ಡಾ. ಪಿ.ಎಲ್​. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀನಿವಾಸ ಕೊಟ್ಯಾನ, ಪಾರ್ವತಿ ಕುರ್ಲೆ, ರವಿಕುಮಾರ ಮಾಳಿಗೇರ, ವೀರನಗೌಡ ಪೊಲೀಸಗೌಡರ, ಡಾ. ವಿ.ಆರ. ಕಿರೇಸೂರ, ಡಾ. ಐ.ಕೆ. ಕಾಳಪ್ಪನವರ, ಡಾ. ಭೀಮಪ್ಪ ಎ., ಡಾ. ಜೆ.ಎಸ್​. ಹಿಳ್ಳಿ, ಇತರರು ಇದ್ದರು.

ಡಾ. ಪಿ.ಯು. ಕೃಷ್ಣರಾಜ ಸ್ವಾಗತಿಸಿದರು. ಡಾ. ಸರೋಜಿನಿ ಕರಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net