ಗ್ರಾಹಕರ ಜತೆಗೆ ಉತ್ತಮ ಬಾಂಧವ್ಯವಿರಲಿ

h19-bankers club
Published on

ಹುಬ್ಬಳ್ಳಿ: ಬ್ಯಾಂಕರ್ಸ್ ಕ್ಲಬ್‌ನ ಹೌಸಿಂಗ್ ಕಾಲನಿ, ಕೆನರಾ ಬ್ಯಾಂಕ್ ಮತ್ತು ಬ್ಯಾಂಕರ್ಸ್ ಕ್ಲಬ್ ಆಶ್ರಯದಲ್ಲಿ ಇಲ್ಲಿಯ ವಿದ್ಯಾನಗರದ ಬ್ಯಾಂಕರ್ಸ್ ಭವನದಲ್ಲಿ ಗ್ರಾಹಕರ ಸಂಪರ್ಕ ಹಾಗೂ ಕೆವೈಸಿ ಕುರಿತ ವಿಚಾರಗೋಷ್ಠಿ ಬುಧವಾರ ಏರ್ಪಡಿಸಲಾಗಿತ್ತು.

ಕೆನರಾ ಬ್ಯಾಂಕ್ ಮಹಾಪ್ರಬಂಧಕ ಎಂ. ವಿಜಯಕುಮಾರ, ನಿವೃತ್ತ ಉಪ ಮಹಾಪ್ರಬಂಧಕ ಕೃಷ್ಣ ಕುಲಕರ್ಣಿ ಮಾತನಾಡಿ, ಗ್ರಾಹಕರ ಜತೆಗೆ ಬ್ಯಾಂಕ್ ಉತ್ತಮ ಬಾಂಧವ್ಯ ಹೊಂದಿರಬೇಕು. ನೇರ ಸಂಪರ್ಕ ಹೊಂದಿ ವಿಶ್ವಾಸ ಗಳಿಸಿದರೆ ಯಾವುದೇ ಸಮಸ್ಯೆ ಉಳಿಯುವುದಿಲ್ಲ ಎಂದರು.

ಉಪ ಮಹಾಪ್ರಬಂಧಕ ಪಾಣಿಗ್ರಾಹಿ, ಪ್ರಾದೇಶಿಕ ಪ್ರಬಂಧಕ ಸಜಲ ಸಮೀರ್ ಮಾತನಾಡಿದರು.

ಹೌಸಿಂಗ್ ಕಾಲನಿ ನಿವೇಶನಗಳಿಗಾಗಿ ಸದಸ್ಯತ್ವ ಅರ್ಜಿಗಳನ್ನು ಮಹಾಪ್ರಬಂಧಕ ಎಂ. ವಿಜಯಕುಮಾರ ಬಿಡುಗಡೆ ಮಾಡಿದರು. ಕ್ಲಬ್ ಅಧ್ಯಕ್ಷ ಡಾ.ಡಿ.ಜಿ. ಶೆಟ್ಟಿ, ಕಾರ್ಯದರ್ಶಿ ರಮೇಶ ಪರ್ವತೀಕರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net