ಒಳ್ಳೆಯದು ಮಾಡುವ ಮನೋಭಾವ ಹೊಂದಿ

Have a good attitude
ಮುದ್ದೇಬಿಹಾಳ ಪಟ್ಟಣದ ಮಾರುತಿನಗರ ಬಡಾವಣೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪುರಾಣ ಮಂಗಲೋತ್ಸವ ಸಮಾರಂಭವನ್ನು ಸಿದ್ಧಲಿಂಗ ದೇವರು ಉದ್ಘಾಟಿಸಿದರು. ಶಿವಕುಮಾರ ಸ್ವಾಮೀಜಿ, ಪ್ರಭುಗೌಡ ದೇಸಾಯಿ, ಗುರು ತಾರನಾಳ, ರಾಮನಗೌಡ ಪಾಟೀಲ, ಸತೀಶಕುಮಾರ ಓಸ್ವಾಲ್​, ಸೋಮನಗೌಡ ಪಾಟೀಲ ನಡಹಳ್ಳಿ ಇತರರಿದ್ದರು.
Published on

ಮುದ್ದೇಬಿಹಾಳ: ದೊಡ್ಡ ಕಾರಿನಲ್ಲಿ ಓಡಾಡುವುದರಿಂದ, ದೊಡ್ಡ ಮಠಕ್ಕೆ ಸ್ವಾಮಿಯಾಗುವುದರಿಂದ ದೊಡ್ಡವರಾಗುವುದಿಲ್ಲ. ಭಕ್ತರ ಪ್ರೀತಿ ಸ್ವಾಮಿಗಳನ್ನು ದೊಡ್ಡವರನ್ನಾಗಿ ಮಾಡುತ್ತದೆ ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.

ಇಲ್ಲಿನ ಮಾರುತಿನಗರ ಬಡಾವಣೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ತಿಂಥಣಿ ಮೌನೇಶ್ವರ ಪುರಾಣ ಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಎಲ್ಲರಿಗೂ ಒಳ್ಳೆಯದನ್ನೇ ಮಾಡುವ ಮನೋಭಾವ ಹೊಂದಬೇಕು. ಪುರಾಣ, ಪ್ರವಚನಗಳಿಂದ ಬದಲಾವಣೆ ಆದರೆ ಸಾರ್ಥಕವಾಗುತ್ತದೆ ಎಂದರು.
ಜಿಪಂ ಮಾಜಿ ಉಪಾಧ್ಯ ಪ್ರಭುಗೌಡ ದೇಸಾಯಿ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಗುರು ತಾರನಾಳ, ಕೆಎಎಸ್​ ಅಧಿಕಾರಿ ರಾಮನಗೌಡ ಪಾಟೀಲ, ಸಾನ್ನಿಧ್ಯ ವಹಿಸಿದ್ದ ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಮಾತನಾಡಿದರು.ದಿ.ಕರ್ನಾಟಕ ಕೋ ಆಪ್​ ಬ್ಯಾಂಕ್​ ಅಧ್ಯ ಸತೀಶಕುಮಾರ ಓಸ್ವಾಲ್​,

ಸೋಮನಗೌಡ ಪಾಟೀಲ ನಡಹಳ್ಳಿ, ಪುರಸಭೆ ಸದಸ್ಯರಾದ ಸದಾಶಿವ ಮಾಗಿ, ಭಾರತಿ ಪಾಟೀಲ, ಕಮಿಟಿ ಅಧ್ಯ ಮಲ್ಲನಗೌಡ ಬಿರಾದಾರ, ರಾಜುಗೌಡ ಬಿರಾದಾರ, ವಿಲಾಸಗೌಡ ಪಾಟೀಲ, ಗುರುಲಿಂಗಪ್ಪಗೌಡ ಪಾಟೀಲ, ಅರವಿಂದ ಕಾಶಿನಕುಂಟಿ, ರವಿ ಪತ್ತಾರ, ಸಾಹೇಬಗೌಡ ಬಿರಾದಾರ, ಶಿವರುದ್ರಪ್ಪ ಕಿತ್ತೂರ, ಹಣಮಂತ ಅಂಬಿಗೇರ, ಲಕ್ಷ$್ಮಣ ಅಂಬಿಗೇರ, ಗಿರಿಧರ ಅಂಬಿಗೇರ, ಸಿದ್ರಾಮಪ್ಪ ಬಾಣಲದಿನ್ನಿ, ಶಿವಪ್ಪ ಚಿಮ್ಮಲಗಿ, ಬಸವರಾಜ ಬೂದಿಹಾಳ, ನಾಗಯ್ಯ ಸ್ಥಾವರಮಠ, ವೀರಸಂಗಯ್ಯ ಹಿರೇಮಠ, ಭೀಮಣ್ಣ ಬಳವಾಟ ಇತರರಿದ್ದರು.

ಗಜಾನನ ಯುವಕ ಮಂಡಳಿಯಿಂದ ಹಲವು ಸಾಧಕರು, ಹಿರಿಯರು ಹಾಗೂ ಪುರಾಣ ನಡೆಸಿಕೊಟ್ಟ ರುನಂದನ ಶಾಸ್ತ್ರಿ, ತಂಡದವರನ್ನು ಸನ್ಮಾನಿಸಲಾಯಿತು. ಶಾರದಾ ಅಂಬಿಗೇರ, ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಬಾಳನಗೌಡ ಪಾಟೀಲ ಸ್ವಾಗತಿಸಿದರು. ಬಸವರಾಜ ಕೋರಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net