ಜೀವನದಲ್ಲಿ ಗುರಿ ಇಟ್ಟುಕೊಳ್ಳಿ: ಜಾನ್ ಮೈಕಲ್ ಕುನ್ಹಾ ಸಲಹೆ

8 - Copy
Published on

ಮೈಸೂರು: ಜೀವನದಲ್ಲಿ ಯಾವಾಗಲೂ ಒಂದು ಗುರಿ ಮತ್ತು ಉದ್ದೇಶವಿರಬೇಕು. ನಾವು ತಲುಪಿರುವ ಹಂತವೇ ಶ್ರೇಷ್ಠವೆಂದು ತೃಪ್ತಿ ಪಟ್ಟುಕೊಳ್ಳಬಾರದು. ಅದನ್ನು ದಾಟಿ ಮುಂದೆ ಹೋಗಲು ಸದಾ ಪ್ರಯತ್ನ ಪಡಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಮೈಸೂರು ಕ್ಯಾಥೋಲಿಕ್ ಧರ್ಮಕ್ಷೇತ್ರ ಮತ್ತು ಮೈಸೂರು ಡಯೋಸಿಸನ್ ಎಜುಕೇಷನಲ್ ಸೊಸೈಟಿ ವತಿಯಿಂದ ಮಂಗಳವಾರ ಸಂತ ಫಿಲೋಮಿನಾ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಹಳ್ಳಿಯ ಮಕ್ಕಳು ಎಂತಹ ಕಷ್ಟದ ಪರಿಸ್ಥಿತಿಯನ್ನು ದಾಟಿ ಮುಂದೆ ಬರುವಷ್ಟರ ಮಟ್ಟಿಗೆ ಸಮರ್ಥರಾಗಿರುತ್ತಾರೆ. ಈ ಕಾರಣಕ್ಕೆ ಹಳ್ಳಿಯ ವಿದ್ಯಾರ್ಥಿಗಳು ಇಂದು ನಗರದ ಮಕ್ಕಳನ್ನು ಕಲಿಕೆಯಲ್ಲಿ ಹಿಂದಿಕ್ಕಿ ಮುಂದೆ ಹೋಗುತ್ತಿದ್ದಾರೆ. ಇದು ಸಂತೋಷದಾಯಕವಾದ ಸಂಗತಿಯಾದರೂ ಕಲಿಯಲು ಎಲ್ಲ ರೀತಿಯ ಅನುಕೂಲತೆಗಳನ್ನು ಪಡೆದಿರುವ ನಗರದ ಮಕ್ಕಳೇಕೆ ಕಲಿಕೆಯಲ್ಲಿ ಹಿಂದೆ ಬೀಳುತ್ತಿದ್ದಾರೆ ಎನ್ನುವುದು ನಿಜಕ್ಕೂ ಬೇಸರದ ವಿಷಯವಾಗಿದೆ ಎಂದರು.
ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಗುರುಗಳಾದ ಡಾ. ಕೆ.ಆಂಟೋನಿ ವಿಲಿಯಂ, ಡಾ.ಥಾಮಸ್ ಎ.ವಾಹಪಳ್ಳಿ, ಪ್ರಾಂಶುಪಾಲ ಅಸಿಸ್ಸಿ ಡಿ.ಅಲ್ಮೇಡಾ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net