6 ತಿಂಗಳಿಗೊಮ್ಮೆ ದಂತ ತಪಾಸಣೆ ಮಾಡಿಸಿ

NRD
Published on

ನರಗುಂದ: ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಉಚಿತ ದಂತ, ಫ್ಲೊರೋಸಿಸ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ರೇಣುಕಾ ಕೊರವನವರ ಮಾತನಾಡಿ, ಬಾಯಿ ಆರೋಗ್ಯ ಪರಿಪೂರ್ಣ ಆರೋಗ್ಯದ ಕೈಗನ್ನಡಿ ಇದ್ದಂತೆ. ನಿಯಮಿತ ದಂತ ತಪಾಸಣೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಮುಖ ಭಾಗವಾಗಿದೆ. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಮುದ್ದೆಯಂತಹ ಖನಿಜಯುಕ್ತ ಆಹಾರ ಸೇವಿಸಬೇಕು ಎಂದು ತಿಳಿಸಿದರು.

ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಹನಾ ಪಿಳ್ಳೆ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ, ವಿಶ್ವ ಕ್ಯಾನ್ಸರ್ ದಿನಾಚರಣೆ, 100 ದಿನ ಕ್ಷಯರೋಗ ಅಭಿಯಾನ, ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನದ ಕುರಿತು ಮಾಹಿತಿ ನೀಡಿದರು. ಡಾ. ವರುಣ ಸವದಿ, ಡಾ. ಶ್ರೀದೇವಿ ಗುಣಗಾ ಅವರು 84 ಜನರಿಗೆ ಉಚಿತ ದಂತ ಚಿಕಿತ್ಸೆ ನೀಡಿದರು. ಹಿರೇಕೊಪ್ಪ ಗ್ರಾಪಂ ಅಧ್ಯಕ್ಷೆ ಮಂಜುಳಾ ಜಗಾಪೂ ಅಧ್ಯಕ್ಷತೆ ವಹಿಸಿದ್ದರು. ಡಾ.ಆರ್.ಆರ್. ಹೊಸಮನಿ, ಕೆ.ಎನ್. ಹದಗಲ್ಲ, ಬಿ.ಎಂ. ಕೌಜಗೇರಿ, ಬಾಲೇಶ ಕಪ್ಪರಟ್ಟಿ, ನೀಲಕಂಠ ಮಡಿವಾಳರ, ಸಿದ್ದಮ್ಮ ಕುರಿ, ಕಸ್ತೂರಿ ಹೂಲಿ, ಸವಿತಾ ಬಿಲ್ಲನ್ನವರ, ಸಿದ್ದು ಚವಡನ್ನವರ, ಇತರರಿದ್ದರು. ಈರಣ್ಣ ಗುಳ್ಳನ್ನವರ, ಸಂತೋಷ ಅಂಬಿಗೇರ, ಜಿ.ವಿ. ಕೊಣ್ಣೂರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net