ಸಾಂಪ್ರದಾಯಿಕ ಮೌಲ್ಯಗಳ ಕಲಿಕೆ ಅತೀ ಅವಶ್ಯ

udp-11-art shibira
Published on

ಉಡುಪಿ: ಸ್ವಚ್ಚಂದದ ಪರಿಸರದಲ್ಲಿ ಸಂಘಟಿಸುತ್ತಿರುವ ಬೇಸಿಗೆ ಶಿಬಿರ ಬಹು ಮಹತ್ವಪೂರ್ಣ ಕೆಲಸ. ಇಂದಿನ ಆಧುನಿಕ ಜೀವನದ ನಡುವೆ ಮಕ್ಕಳಲ್ಲಿ ಸಾಂಪ್ರದಾಯಿಕ ಮೌಲ್ಯಗಳನ್ನು ಕಲಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಮಣಿಪಾಲದ ವೈದ್ಯೆ ಡಾ. ಮಾಧುರಿ ಭಟ್​ ಹೇಳಿದರು.

ಗುರುವಾರ ಭಾವನಾ ಪೌಂಡೇಶನ್​ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಶ್ರಯದಲ್ಲಿ ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಆಯೋಜಿಸಿರುವ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಬಿರ ಸಂಯೋಜಕ ಡಾ. ಜನಾರ್ದನ ಹಾವಂಜೆ ಮಾತನಾಡಿ, ಬೇಸಿಗೆ ಶಿಬಿರವು ನಾಲ್ಕು ದಿನ ನಡೆಯಲಿದ್ದು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಬಿಹಾರದ ಜನಪದ ಕಲೆಗಳ ಕಲಿಕೆ, ಕಸದಿಂದ ರಸ, ಪಕ್ಷಿ ವೀಕ್ಷಣೆ, ಮನೆಮದ್ದು, ಗ್ರಾಮೀಣ ಆಟಗಳು, ಬಟ್ಟೆಯ ಮೇಲೆ ಮುದ್ರಣ ಕಲೆ ಮುಂತಾಗಿ ಹತ್ತು ಹಲವಾರು ಅಂಶಗಳನ್ನು ಶಿಬಿರದಲ್ಲಿ ಕಲಿಸಿ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ವಕೀಲ ಮುಗ್ಗೇರಿ ನಾಗರಾಜ ಭಟ್​, ಭಾವನಾ ಫೌಂಡೇಶನ್​ನ ಸ್ಥಾಪಕಾಧ್ಯಕ್ಷ ಯಕ್ಷಗುರು ಹಾವಂಜೆ ಮಂಜುನಾಥ ರಾವ್​ ಹಾಗೂ ವಿಶುರಾವ್​ ಹಾವಂಜೆ ಹಾಗೂ ಉದಯ್​ ಕೋಟ್ಯಾನ್​ ಉಪಸ್ಥಿತರಿದ್ದರು.

14ಕ್ಕೆ ಸಮಾರೋಪ
ಶಿಬಿರದ ಸಮಾರೋಪ ಸಮಾರಂಭ ಏ. 14ರಂದು 2:30ಕ್ಕೆ ನೆರವೇರಲಿದ್ದು, ಇದೇ ಸಂದರ್ಭದಲ್ಲಿ ಕಲಾ ಸಿಂಧು ಪುರಸ್ಕಾರವನ್ನು ವಿದುಷಿ ಪವನ ಬಿ. ಆಚಾರ್​ ಹಾಗೂ ಭಾವನಾ ಪುರಸ್ಕಾರವನ್ನು ಹೋಂ ಡಾಕ್ಟರ್​ ಪೌಂಡೇಶನ್​ನ ಡಾ. ಶಶಿಕಿರಣ್​ ಶೆಟ್ಟಿಯವರಿಗೆ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net