

ಕಲಬುರಗಿ: 2017ರಲ್ಲಿನ ಜೀವ ಬೆದರಿಕೆ, ಅಟ್ರಾಸಿಟಿ ಪ್ರಕರಣದಲ್ಲಿ ಜೈ ಭಾರತ್ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ನಿರಗುಡಿಯ ಹವಾ ಮಲ್ಲಯ್ಯ ಮುತ್ಯಾನನ್ನು 12 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯ ಆದೇಶಿಸಿದೆ.
ಮಾ.2ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನಗರದ 2ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಡಿ.ಮುಜೀರ್ ಉಲ್ಲಾ ಆದೇಶಿಸಿದ್ದಾರೆ.
ನಗರದ ಎಂಬಿ ನಗರ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಹವಾ ಮಲ್ಲಿನಾಥ ಮುತ್ಯಾ ಅವರ ಅಕ್ಕನ ಮಗ ಪ್ರಕಾಶ ವಿರುದ್ಧ ಅಟ್ರಾಸಿಟಿ ಸೇರಿ ೪೯೮/ಅ, ೫೦೬,೧೦೯, ೩೪ ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಹವಾ ಮಲ್ಲಯ್ಯ ಮುತ್ಯಾ ಎರಡನೇ ಆರೋಪಿಯಾಗಿದ್ದರು.
ನ್ಯಾಯಾಲಯ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಸತತ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಬಳಿಕ ಹವಾ ಮಲ್ಲಿನಾಥ ಮುತ್ಯಾ ಸೋಮವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಅವರ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪದ ನ್ಯಾಯಾಧೀಶರು 12 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದ್ದಾರೆ.