ಗಣಪನಿಗೆ 3 ಸಾವಿರ ಕೊಟ್ಟೆ ಕಡುಬು

kadubu new
Published on

ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶನಿವಾರ ಊರಿನ ಸಮಸ್ತ ನಾಗರಿಕರಿಂದ ದೇವರಿಗೆ ವಿಶೇಷ ಮೂರು ಸಾವಿರ ಹಲಸಿನೆಲೆ ಕೊಟ್ಟೆ ಕಡುಬು ಸೇವೆ ನೆರವೇರಿತು.

ಹಟ್ಟಿಯಂಗಡಿ ದೇವಸ್ಥಾನ ಪರಿಸರದ ಕೃಷಿಕರು ಬೆಳದ ಭತ್ತ ದೇವರಿಗೆ ಅರ್ಪಿಸಿ ಪ್ರತಿ ವರ್ಷದಂತೆ ಹಲಸಿನೆಲೆ ಕೊಟ್ಟೆ ಕಡುಬು ರಾಶಿ ಪೂಜೆ ಸೇವೆ ನಡೆಸಿದರು. ದೇವರ ಸನ್ನಿಧಾನದಲ್ಲಿ ಕೊಟ್ಟೆ ಕಡಬು ರಾಶಿ ಹಾಕಿ ನೈವೇದ್ಯ ಮಾಡಿ, ಊರಿನ ಸಮಸ್ತ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಯಿತು. ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆಡಳಿತ ಮೊಕ್ತೇಸರ ಬಾಲಚಂದ್ರ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿ, ದೇವರಿಗೆ ಕೊಟ್ಟೆ ಕಡುಬು ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net