

ಕುಂದಾಪುರ : ಹಟ್ಟಿಯಂಗಡಿ ಖಾಸಗಿ ಶಾಲಾ ವಿದ್ಯಾರ್ಥಿನಿ ಮನೆಯಲ್ಲಿ ಕುಸಿದು ಬಿದ್ದಿ ಗುರುವಾರ ಮೃತಪಟ್ಟಿದ್ದಾಳೆ.
ಕುಂದಾಪುರದಲ್ಲಿ ಅಕ್ಷರ ದಾಸೋಹ ಯೋಜನೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಪುತ್ರಿ ಅನುಶ್ರೀ (೧೩) ಮೃತಪಟ್ಟ ಬಾಲಕಿ.
ಮನೆಯಲ್ಲಿ ಓದುತ್ತಿದ್ದ ವೇಳೆ ಅನುಶ್ರೀ ಇದ್ದಕ್ಕಿದ್ದಂತೆ ಕುಸಿದು ಪ್ರಜ್ಞೆ ಕಳೆದುಕೊಂಡಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆಕೆ ಕೊನೆಯುಸಿರೆಳೆದಿದ್ದಾಳೆಂದು ತಿಳಿದುಬಂದಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಅನುಶ್ರೀ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಅನುಶ್ರೀ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದು, ಪಠ್ಯ ಹಾಗೂ ಪತ್ಯೇತರ ಚಟುವಟಿಕೆಗಳಲ್ಲಿ ಚುರುಕಾಗಿದ್ದಳು. ಹಕ್ಲಾಡಿ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲಾ ಶಿಕ್ಷಕಿ ಭಾರತಿ ಎ.ಶೆಟ್ಟಿ ಪುತ್ರಿ
ಕಣ್ಣುದಾನ
ಭಾರತಿ ಮತ್ತು ಅರುಣ ಕುಮಾರ್ ದಂಪತಿ ಒಬ್ಬರ ಮಕ್ಕಳಲ್ಲಿ ಅನುಶ್ರೀ ಅಗಲಿಕೆಯ ನೋವಲ್ಲೂ ಕಣ್ಣು ದಾನ ಮಾಡುವ ಮೂಲಕ ನೋವಲ್ಲೂ ಸಾಮಾಜಿಕ ಕಾಳಜಿ ತೋರಿಸಿದ್ದಾರೆ. ಕಣ್ಣುಗಳನ್ನು ದಾನ ಮಾಡಲಾಗಿದ್ದು, ಗುರುವಾರ ರಾತ್ರಿ ತಾಯಿಯ ಮನೆ ಪರಿಸರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.