ಒಂದು ದಿನದ ವೇತನ ಕಡಿತಗೊಳಿಸದಿರಿ

Untitled design(12)
Published on

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಹೊಸ ವೇತನದ ಅರಿಯರ್ಸ್‌ನಲ್ಲಿ ಒಂದು ದಿನದ ವೇತನ ಕಡಿತಗೊಳಿದಿರಲು ಒತ್ತಾಯಿಸಿ ಟಿಯುಸಿಐ ಸಂಘಟನೆ ಬಳ್ಳಾರಿಯಲ್ಲಿ ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಡಿಸೆಂಬರ್ 19ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ 2/3ರಷ್ಟು ಕಾರ್ಮಿಕರು ಭಾಗವಹಿಸಿಲ್ಲ. ಅರಿಯರ್ಸ್‌ನಿಂದ ಒಂದು ದಿನದ ವೇತನ ಕಡಿತಗೊಳಿಸುವ ಕಾರ್ಮಿಕ ಸಂಘದ ತೀರ್ಮಾನಕ್ಕೆ ಬಹುಸಂಖ್ಯಾತ ಸದಸ್ಯರ ಒಪ್ಪಿಗೆ ಇಲ್ಲ ಎಂಬುದು ತೋರಿಸುತ್ತದೆ. ಈ ಕುರಿತು ಪರಿಶೀಲನೆ ಮಾಡಬೇಕು. ಒಂದು ದಿನದ ವೇತನ ಹಿಡಿದುಕೊಳ್ಳುವ ಅಂಶ ಕೈಬಿಡಬೇಕೆಂದು ಆಗ್ರಹಿಸಿದರು.

ಟಿಯುಸಿಐ ಪ್ರಮುಖರಾದ ಗುಡದಪ್ಪಭಂಡಾರಿ, ಡಿಕೆ.ಲಿಂಗಸುಗೂರು, ಮಹ್ಮದ್ ರಫೀ, ನರಸಿಂಗ್ ರಾಯ ಮಲ್ಲೇಶ್, ಗುಡದಪ್ಪ ಭಂಡಾರಿ, ಗಣೇಶ ಗೌಡೂರು, ಗೋವಿಂದಪ್ಪ ಕಲ್‌ಲ್, ನರಸಿಂಗರಾಯ, ಆನಂದ ಗೌಡೂರು, ರಾಮಮೂರ್ತಿ , ಮಾಲಾದ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net