ಸಂಸ್ಕಾರಯುತ ಶಿಕ್ಷಣ ಅವಶ್ಯ- ಅಭಿನವ ಗಜದಂಡ ಶಿವಯೋಗಿಗಳ ಆಶೀರ್ವಚನ

180223 Hatti Prathipha Purashkara
ಹಟ್ಟಿ ಪಟ್ಟಣದ ಅಮರೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರವನ್ನು ದೇವರಭೂಪೂರು ಬೃಹನ್ಮಠದ ಅಭಿನವ ಗಜದಂಡ ಶಿವಯೋಗಿಗಳು ಉದ್ಘಾಟಿಸಿದರು.
Published on

ಹಟ್ಟಿಚಿನ್ನದಗಣಿ: ನೈತಿಕ ಮೌಲ್ಯಗಳು ಅಧಪತನವಾಗುವ ಈಗಿನ ಕಾಲದಲ್ಲಿ ಸಂಸ್ಕಾರಯುತ ಶಿಕ್ಷಣ ಅವಶ್ಯವಾಗಿದೆ ಎಂದು ದೇವರಭೂಪೂರು ಬೃಹನ್ಮಠದ ಅಭಿನವ ಗಜದಂಡ ಶಿವಯೋಗಿಗಳು ಹೇಳಿದರು. ಸ್ಥಳೀಯ ಅಮರೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ, ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಶಿಕ್ಷಣ ಸಂಸ್ಥೆ ಕಟ್ಟುವುದು ಬಹು ಕಷ್ಟದ ಕಾರ್ಯ, ಉತ್ತಮ ಶಿಕ್ಷಣ ನೀಡಿ ಮಕ್ಕಳ ಉಜ್ವಲ ಭವಿಷ್ಯವನ್ನು ನಿರ್ಮಿಸುವುದು ಶಿಕ್ಷಕರ ಗುರುತರ ಜವಾಬ್ದಾರಿಯಾಗಿದೆ. ಶಿಕ್ಷಕರಾದವರು ದಿನನಿತ್ಯ ಆಭ್ಯಾಸದಲ್ಲಿ ತೊಡಗಿದಾಗ ಮಾತ್ರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು.

ಮಕ್ಕಳನ್ನು ವೈದ್ಯರು, ಇಂಜಿನಿಯರ್ ಆಗಿ ನೋಡಬೇಕೆನ್ನುವ ಬಯಕೆಯ ಜತೆಗೆ ಮನೆಗೊಬ್ಬ ದೇಶ ಕಾಯುವ ಸೈನಿಕನನ್ನಾಗಿ, ಅನ್ನ ನೀಡುವ ರೈತನನ್ನಾಗಿ ನಿರ್ಮಾಣ ಮಾಡಬೇಕೆನ್ನುವ ಗುರಿಯೊಂದಿಗೆ ಇಂದು ಮಕ್ಕಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net