ಸೋಲು ಗೆಲುವು ಸಮನಾಗಿ ಸ್ವೀಕರಿಸಿ

11092022 Hutti gold mine sports
Published on

ಹಟ್ಟಿಚಿನ್ನದಗಣಿ: ಸ್ಪರ್ಧಾ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಬಿಜೆಪಿ ಮುಖಂಡ ಕರಿಯಪ್ಪ ಡಿ.ವಜ್ಜಲ್ ಹೇಳಿದರು.

ಹಟ್ಟಿಚಿನ್ನದಗಣಿ ಕಂಪನಿಯ ದಾರುವಾಲಾ ಕ್ರೀಡಾಂಗಣದಲ್ಲಿ ಪಿಯು ಕಾಲೇಜು ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಭಾನುವಾರ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಗಳ ಬಗ್ಗೆ ಆಸಕ್ತಿ ತೋರಬೇಕು. ಕ್ರೀಡಾಪಟುಗಳು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದ ಇರುತ್ತಾರೆ. ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯ ಎಂದರು.

ದಳಪತಿ ಗುಂಡಪ್ಪಗೌಡ ಪೊಲೀಸ್ ಪಾಟೀಲ್, ಪಪಂ ಮಾಜಿ ಅಧ್ಯಕ್ಷೆ ವಿಜ್ಜಮ್ಮ ಜೇರಬಂಡಿ, ತಾಪಂ ಮಾಜಿ ಅಧ್ಯಕ್ಷೆ ಬಸ್ಸಮ್ಮ ಯಾದವ್, ಸ.ಪ.ಪೂ. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತರೆಡ್ಡಿ ಭೋವಿ, ಪ್ರಾಚಾರ್ಯೆ ಕಮಲಮ್ಮ, ಪ್ರಮುಖರಾದ ಶಂಕರಗೌಡ ಬಳಗಾನೂರು, ಎನ್.ಸ್ವಾಮಿ ನಾಯಿಕೋಡಿ, ಪರಮೇಶ್ ಯಾದವ್, ಸತ್ಯನಾರಾಯಣ ಶೆಟ್ಟಿ, ಬಾಲಪ್ಪ ನಾಯಕ್, ಬಸವರಾಜ್ ಪೈ ನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net