ಬೃಂದಾವನಕ್ಕೆ ಗಂಧಲೇಪನ ಸಹಿತ ಅಲಂಕಾರ

10 HATTI 1
ಹಟ್ಟಿ ಕ್ಯಾಂಪಿನ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ರಾಯರ ಬೃಂದಾವನಕ್ಕೆ ಗಂಧಲೇಪನ ಸಹಿತ ಅಲಂಕಾರ ಮಾಡಲಾಗಿತ್ತು. ಮಠದ ವ್ಯವಸ್ಥಾಪಕ ವಿನಾಯಕ ಪ್ರಸಾದ್ ಮಟಂ, ಅರ್ಚಕ ಮುರಲೀಧರ್ ಆಚಾರ್ಯ ಇದ್ದರು.
Published on


ಹಟ್ಟಿಚಿನ್ನದಗಣಿ: ಅಕ್ಷಯ ತೃತೀಯಾ ಹಬ್ಬದ ನಿಮಿತ್ತ ಹಟ್ಟಿ ಕ್ಯಾಂಪಿನ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ರಾಯರ ಬೃಂದಾವನಕ್ಕೆ ಹಾಗೂ ಮುಖ್ಯಪ್ರಾಣ ಹನುಮಂತ ದೇವರಿಗೆ ಶುಕ್ರವಾರ ವಿಶೇಷ ಗಂಧಲೇಪನ ಸಹಿತ ಅಲಂಕಾರ ಮಾಡಲಾಗಿತ್ತು.
ಪ್ರತಿದಿನ ಬೆಳಗ್ಗೆ ಅಷ್ಟೋತ್ತರ ಪಾರಾಯಣ, ನಿರ್ಮಾಲ್ಯ ವಿಸರ್ಜಜನೆ, ಸುಪ್ರಭಾತ, ವಿಶೇಷ ಅಭಿಷೇಕ, ಪಲ್ಲಕ್ಕಿ ಉತ್ಸವ, ರಥೋತ್ಸವ, ಮಧ್ಯಾಹ್ನ ತೀರ್ಥ-ಪ್ರಸಾದ ಸಾಯಂಕಾಲ ಭಜನೆ, ಚಿಣ್ಣರಿಂದ ಕೋಲಾಟ, ಫಲ ಮಂತ್ರಾಕ್ಷತೆ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net