ಗುರುಸಾರ್ವಭೌಮರಿಗೆ ವಿಶೇಷ ಪೂಜೆ

22
Published on

ಹಟ್ಟಿಚಿನ್ನದಗಣಿ: ನಂಜನಗೂಡು ರಾಘವೇಂದ್ರ ಸ್ವಾಮಿಗಳವರ ಶಾಖಾ ಮಠ ಹಟ್ಟಿಚಿನ್ನದಗಣಿಯಲ್ಲಿ ಗುರುಸಾರ್ವಭೌಮರ ಪಟ್ಟಾಭಿಷೇಕ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ನಡೆದವು. ಬೆಳಗ್ಗೆ ಅಷ್ಟೋತ್ತರ ಪಾರಾಯಣ, ಮುಖ್ಯಪ್ರಾಣ ಹನುಮಂತ ದೇವರು ಹಾಗೂ ರಾಯರ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಸಂಜೆ ಭಜನೆ, ಪಲ್ಲಕ್ಕಿ ಉತ್ಸವ ಇತರ ಕಾರ್ಯಕ್ರಮಗಳು ಜರುಗಿದವು. ಮಠದ ವ್ಯವಸ್ಥಾಪಕ ವಿನಾಯಕ ಪ್ರಸಾದ್ ಮಟಂ, ಅರ್ಚಕ ಮುರಳೀಧರ ಆಚಾರ್, ನಾರಾಯಣರಾವ್ ಕುಲಕರ್ಣಿ ಗಡಚಿಂಚಿ ಹಾಗೂ ವಿಪ್ರ ಬಾಂಧವರು ಪಾಲ್ಗೊಂಡಿದ್ದರು.

ಫೆ.26ರಂದು ರಾಯರ ವರ್ಧಂತ್ಯುತ್ಸವ ಅಂಗವಾಗಿ ಶ್ರೀ ಮಠದಲ್ಲಿ 24ರ ಸಂಜೆ 6 ಗಂಟೆಗೆ ಪ್ರವಚನ ಹಾಗೂ 26ರಂದು ರಥೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವ್ಯವಸ್ಥಾಪಕರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net