ಖಾಸಗಿ ಸಂಸ್ಥೆಗಳಿಂದ ಶಿಕ್ಷಣ ದುಬಾರಿ

HUTTI 01
ಹಟ್ಟಿ ಪಟ್ಟಣದಲ್ಲಿ ಎಸ್‌ಎಫ್‌ಐ ಸಂಘಟನೆಯಿಂದ ರಾಜ್ಯಮಟ್ಟದ ಶೈಕ್ಷಣಿಕ ಜಾಥಾ ನಡೆಯಿತು. ರಾಜ್ಯ ಉಪಾಧ್ಯಕ್ಷ ಗ್ಯಾನೇಶ ಕಡಗದ, ಜಂಟಿ ಕಾರ್ಯದರ್ಶಿ ಗಣೇಶ ರಾಠೋಡ, ತಾಲೂಕು ಅಧ್ಯಕ್ಷ ಗೋವಿಂದ, ಜನವಾದಿ ಮಹಿಳಾ ಸಂಘಟನೆ ತಾಲೂಕು ಉಪಾಧ್ಯಕ್ಷರಾದ ಶಾಂತಕುಮಾರಿ, ಶಹೀರಾಬಾನು, ರಜಿಯಾಬೇಗಂ, ವನಜಾಕ್ಷಿ, ಸಿಐಟಿಯುನ ನಿಂಗಪ್ಪ ವೀರಾಪುರ, ಆಜೀಬಾಬು, ಶಂಶುದ್ದೀನ್, ಫಯಾಜ್, ರಿಯಾಜ್, ಗೋಪಾಲ ಹಾಗೂ ವಿದ್ಯಾರ್ಥಿಗಳು ಇದ್ದರು.
Published on

ಹಟ್ಟಿಚಿನ್ನದಗಣಿ: ಶಿಕ್ಷಣದ ವ್ಯಾಪಾರೀಕರಣ, ಕೇಂದ್ರೀಕರಣ, ಭ್ರಷ್ಟಾಚಾರ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ವಿರುದ್ಧ ಎಸ್‌ಎಫ್‌ಐ ನಿರಂತರವಾಗಿ ಹೋರಾಟ ಮಾಡುತ್ತಿದೆ ಎಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಡಾ.ದೊಡ್ಡಬಸವರಾಜ ಹೇಳಿದರು.

ಸಾರ್ವಜನಿಕ ಶಿಕ್ಷಣ ಉಳಿವು, ಹಾಸ್ಟೆಲ್ ಬಲವರ್ಧನೆಗಾಗಿ ಗುರುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶೈಕ್ಷಣಿಕ ಜಾಥಾದಲ್ಲಿ ಮಾತನಾಡಿದರು. ಶಿಕ್ಷಣ ನೀತಿಗಳು ರೂಪುಗೊಂಡು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಮತ್ತು ಕಾರ್ಪೋರೇಟ್ ಸಂಸ್ಥೆಗಳ ಕೈಗೆ ಶಿಕ್ಷಣ ಸಿಕ್ಕು ನರಳುವಂತಾಗಿದೆ.

ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಾಲದಲ್ಲೂ ವಿಜ್ಞಾನ-ತಂತ್ರಜ್ಞಾನ ಬೆಳೆಯುತ್ತಿರುವಾಗ, ಶಿಕ್ಷಣದಲ್ಲಿ ಕೇಸರೀಕರಣ ಮತೀಯವಾದ ಬೆರೆಸಿ ವಿದ್ಯಾರ್ಥಿ ಯುವಜನರು ಶಿಕ್ಷಣ, ಉದ್ಯೋಗದ ಅರಿವಿಲ್ಲದೆ ಸಾಮಾಜಿಕ ಪ್ರಚೋದನೆ, ಗಲಭೆ ಮತ್ತು ಮೌಢ್ಯಗಳಿಗೆ ಬಲಿಯಾಗುತ್ತಿದ್ದು, ಈ ಕುರಿತು ಪ್ರಜ್ಞಾವಂತರು ಚಿಂತಿಸಬೇಕಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಖಾಸಗಿ ಸಂಸ್ಥೆಗಳು ಶಿಕ್ಷಣವನ್ನು ಇನ್ನೂ ದುಬಾರಿ ಮಾಡಿವೆ ಎಂದರು.

ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ ಮಾತನಾಡಿ, ಹಟ್ಟಿಗೆ ಪದವಿ ಕಾಲೇಜು ಬೇಕೆಂದು ನಡೆಸುತ್ತಿರುವ ಹೋರಾಟವನ್ನು ಸ್ಥಳೀಯ ಶಾಸಕರು ನಿರ್ಲಕ್ಷಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಶಾಸಕ ಮಾನಪ್ಪ ವಜ್ಜಲ್ ಸಾಧನೆ ಶೂನ್ಯ. ಹಾಸ್ಟೆಲ್‌ಗಳಲ್ಲಿ ಕನಿಷ್ಠ ಕುಡಿವ ನೀರು, ಶೌಚಗೃಹಗಳಂಥ ಮೂಲಸೌಕರ್ಯಗಳಿಲ್ಲ. ವಿದ್ಯಾರ್ಥಿಗಳು ಎಷ್ಟೇ ಹೋರಾಟ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net