ಶಾಂತಿ ಕದಡುವವರಿಗೆ ಸಹಾಯ ಸರಿಯಲ್ಲ; ಸಚಿವ ಹಾಲಪ್ಪ ಆಚಾರ್ ಅನಿಸಿಕೆ

25122021 Halappa achar
Published on

ಹಟ್ಟಿಚಿನ್ನದಗಣಿ: ಹುಬ್ಬಳ್ಳಿ ಗಲಭೆಕೋರರ ಕುಟುಂಬಗಳಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಸಹಾಯ ಹಸ್ತ ನೀಡುವುದಾಗಿ ಹೇಳಿರುವುದು, ಅವರ ದೇಶ ಪ್ರೇಮ ಹಾಗೂ ಸಂವಿಧಾನದ ಮೇಲಿನ ಬದ್ಧತೆ ತೋರಿಸುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ದರೋಡೆಕೋರರು, ಶಾಂತಿ ಕದಡುವವರಿಗೆ ಸಹಾಯ ಮಾಡೋದು ಸರಿಯಲ್ಲ. ಈ ಕುರಿತು ಶಾಸಕ ಜಮೀರ್ ಅಹ್ಮದ್ ಖಾನ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಂತಿ ಕದಡುವವರಿಗೆ ಕಿಟ್ ಕೊಡ್ತೀನಿ, ಸಹಾಯ ಮಾಡ್ತೀನಿ ಎಂದು ಹೇಳುತ್ತಿರುವುದು ದೇಶದ ಐಕ್ಯತೆಗೆ ಧಕ್ಕೆ ತರುವ ವಿಚಾರವಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net