ನಾಗ ದೇವತೆ ಮೂರ್ತಿ ಪ್ರತಿಷ್ಠಾಪನೆ

Hutti Nagappa Statue Fundation
ಹಟ್ಟಿ ಪಟ್ಟಣಪಂಚಾಯಿತಿ ವ್ಯಾಪ್ತಿಯ ಆಂಜನೇಯ ದೇವಸ್ಥಾನದಲ್ಲಿ ನಾಗಪಂಚಮಿ ನಿಮಿತ್ತ ನಾಗದೇವರ ಪ್ರತಿಷ್ಠಾಪನೆ ಶುಕ್ರವಾರ ನಡೆಯಿತು.
Published on

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣಪಂಚಾಯಿತಿ ವ್ಯಾಪ್ತಿಯ ಆಂಜನೇಯ ದೇವಸ್ಥಾನದಲ್ಲಿ ನಾಗಪಂಚಮಿ ನಿಮಿತ್ತ ನಾಗದೇವರ ಶಿಲಾ ಮೂರ್ತಿ ಪ್ರತಿಷ್ಠಾಪನೆ ಶುಕ್ರವಾರ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಹೋಮ-ಹವನ, ತೀರ್ಥ-ಪ್ರಸಾದ ವಿತರಣೆ ಮೊದಲಾದ ಕಾರ್ಯಕ್ರಮಗಳು ನಡೆದವು. ಶ್ರೀನಿವಾಸ ನಾಡಪುರೋಹಿತ ತಂಡ ಹೋಮ ಕಾರ್ಯಕ್ರಮ ನಡೆಸಿಕೊಟ್ಟಿತು.

12 ನಾಗದೇವರಿಗೆ ಪೂಜೆ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಮಹಿಳೆಯುರು ನಾಗರ ಪಂಚಮಿ ನಿಮಿತ್ತ ಶುಕ್ರವಾರ ಸರ್ಪ ದೇವತೆಗಳಾದ ಅನಂತ, ವಾಸುಕಿ, ಶೇಷ, ಪದ್ಮ, ಕಂಬಲ, ಅಶ್ವತಾರ ಶಂಖಪಾಲ, ಧೃತರಾಷ್ಟ್ರ, ತಕ್ಷಕ, ಕಾಳಿಂಗ, ಪಿಂಗಲ ಹಾಗೂ ಕಾರ್ಕೋಟಕ ಹೆಸರುಗಳನ್ನು ಬರೆದು ಪೂಜೆ ಸಲ್ಲಿಸಿದರು. ಇದೇ ವೇಳೆ ನಾಗದೇವೆತೆಗೆ ಹಾಲೆರೆದು ಭಕ್ತಿ ಸಪರ್ಮಿಸಿದರು. ವಿಪ್ರ ಸಮುದಾಯದವರು ಹುತ್ತದ ಮಣ್ಣಿನಿಂದ ಹೆಣ್ಣು-ಗಂಡು ಆಕಾರದ ನಾಗಪ್ರತಿಮೆ ತಯಾರಿಸಿ, ಪೂಜೆ ಸಲ್ಲಿಸಿ, ಹಾಲೆರೆದರು. ಹಟ್ಟಿಚಿನ್ನದಗಣಿಯ ನಾಗಲಿಂಗೇಶ್ವರ ದೇವಸ್ಥಾನ, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಶಾಖಾಮಠ, ಗುಂಡೂರಾವ್ ಕಾಲನಿಯ ಬಯಲು ಆಂಜನೇಯ, ಬಸವ ಸಮಿತಿಯಲ್ಲಿನ ಶೇಷದೇವ ಮೊದಲಾದ ನಾಗದೇವತೆಗಳಿಗೆ ಅಲ್ಲದೇ ದತ್ತಾತ್ರೇಯನಿಗೆ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net