ವಿಮೆ ಇಲ್ಲದಿದ್ದರೆ ವಾಹನ ಜಪ್ತಿ, ಸಿಪಿಐ ಪ್ರಕಾಶ್ ಎಲ್.ಮಾಳಿ ಎಚ್ಚರಿಕೆ

021122 Hatti Pledge teaching to motorists
ಹಟ್ಟಿಯಲ್ಲಿ ವಾಹನ ಚಾಲಕರಿಗೆ ಸಿಪಿಐ ಪ್ರಕಾಶ್ ಎಲ್.ಮಾಳಿ ಬುಧವಾರ ಪ್ರತಿಜ್ಞಾವಿಧಿ ಬೋಧಿಸಿದರು.
Published on

ಹಟ್ಟಿಚಿನ್ನದಗಣಿ: ರಸ್ತೆಗಿಳಿಯುವ ಪ್ರತಿಯೊಂದು ವಾಹನಕ್ಕೆ ವಿಮೆ ಇರಬೇಕು. ಅಸಡ್ಡೆ ಮಾಡಿದರೆ ವಾಹನ ಜಪ್ತಿ ನಿಶ್ಚಿತ ಎಂದು ಸಿಪಿಐ ಪ್ರಕಾಶ್ ಎಲ್.ಮಾಳಿ ಎಚ್ಚರಿಸಿದರು.

ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಹಾಗೂ ಆಟೋ ಚಾಲಕ-ಮಾಲೀಕರಿಗೆ ವಿಮೆ ಮಾಡಿಸುವ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ದೇಶದಲ್ಲಿ ಜನಸಾಮಾನ್ಯರಿಗೆ ತೊಂದರೆ ಕೊಡುವ ಯಾವುದೇ ಕಾನೂನುಗಳಿಲ್ಲ. ನಮ್ಮ ಸುರಕ್ಷತೆಗಾಗಿ ನಾವು ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ವಿಮೆಮಾಡಿಸಲು 3 ದಿನ ಅವಕಾಶ ನೀಡಲಾಗುವುದು. ನಂತರ ವಿಮೆ ಹೊಂದಿರದ ಪ್ರತಿಯೊಂದು ಬೈಕು, ಆಟೋ ಹಾಗೂ ಇತರ ವಾಹನಗಳನ್ನು ಜಪ್ತಿ ಮಾಡಲಾಗುವುದು. ಟ್ಯಾಕ್ಸಿ ಪರ್ಮಿಟ್ ಇಲ್ಲದೆ ಚಲಾಯಿಸುವ ವಾಹನಗಳನ್ನು ನೇರವಾಗಿ ಆರ್‌ಟಿಒ ಸುಪರ್ದಿಗೆ ನೀಡಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net